ನಾರಾವಿ ಶ್ರೀ ಸೂರ್ಯನಾರಾಯಣ ದೇವರ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಡಾ.ಚಾರುಕೀರ್ತಿ ಶ್ರೀ ಆಶೀರ್ವಚನ ನೀಡಿದರು. ವಿನಯ ಹೆಗ್ಡೆ, ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್, ಶ್ವೇತಾ ಜೈನ್ ಮತ್ತಿತರರಿದ್ದರು. 
ಉಡುಪಿ

ಸೂರ್ಯದೇವನಿಂದ ಆರೋಗ್ಯ ಕಾಂತಿ, ಕೀರ್ತಿ

ಬೆಳ್ತಂಗಡಿ: ಭಕ್ತಿ ಇದ್ದಲ್ಲಿ ಮುಕ್ತಿ ಪ್ರಾಪ್ತವಾಗುತ್ತದೆ. ಸೂರ್ಯ ದೇವರ ಶಕ್ತಿ ಪ್ರತ್ಯಕ್ಷವಾಗಿರುವುದರಿಂದ ಅದು ಶ್ರೇಷ್ಠ ಮಾತ್ರವಲ್ಲದೆ ಚೈತನ್ಯಕರವೂ ಆಗಿದೆ ಎಂದು ಮೂಡಬಿದರೆಯ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಹೇಳಿದರು.
ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮಂಗಳವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸೂರ್ಯದೇವ ನಮ್ಮೆಲ್ಲರ ಆರೋಗ್ಯ ಕಾಂತಿಗೆ, ಕೀರ್ತಿಗೆ ಕಾರಣ. ನಮ್ಮ ಸಮಾಜದ 16 ಸಮುದಾಯಗಳಿಗೆ ಸೇವೆ ಮಾಡಲು ಅವಕಾಶವಿರುವುದು ಜಾತ್ರೆಯಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ. ಶಾಲೆಗಳು ಇರದ ಕಾಲದಲ್ಲಿ ದೇವಸ್ಥಾನಗಳು ಸಂಸ್ಕಾರ ಕೇಂದ್ರಗಳಾಗಿದ್ದವು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ, ಅಭಯಚಂದ್ರ ಜೈನ್, ವಕೀಲೆ ಶ್ವೇತಾ ಜೈನ್, ರಘುರಾಮ ಶೆಟ್ಟಿ ಮಾಳ, ನಿವೃತ್ತ ಅಧ್ಯಾಪಕ ಎಂ.ಕೆ.ಅರಿಗ, ಪೆರಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಪ್ರವೀಣ ಕುಮಾರ್ ಜೈನ್, ಪ್ರವೀಣ ಪಿಂಟೋ, ಸಂಜೀವ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಪೀತಾಂಬರ ಹೆರಾಜೆ, ಪೆರಾಡಿ ಸಿ.ಎ.ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ, ಸದಾನಂದ ಪೂಜಾರಿ, ದಿನೇಶ್ ಶೆಟ್ಟಿ, ಚಂದ್ರಶೇಖರ್ ಜಾರೋಡಿ, ನಾರಾವಿ ಭಾ.ಜೈನ್ ಮಿಲನ್ ಅಧ್ಯಕ್ಷ ಕಿಶೋರ್ ಕುಮಾರ್ ಕಂಠಾವು, ದಿನೇಶ್ ಶೆಟ್ಟಿ, ದೇವಳದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಇದ್ದರು. ಧರಣೇಂದ್ರ ಜೈನ್ ಸ್ವಾಗತಿಸಿ, ಸತೀಶ್ ಹೊಸ್ಮಾರ್ ಸ್ವಾಗತಿಸಿದರು.
ಆನೆಗುಂದಿ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಬೆಳಗ್ಗೆ ದೇವಳಕ್ಕೆ ಭೇಟಿ ನೀಡಿದರು. ಯೋಗಾಸನ ನೃತ್ಯ, ಮಹಿಳಾ ಕುಣಿತ ಭಜನೆ ನಡೆಯಿತು.

ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಲಕ್ಷಾಂತರ ನಮ್ಮ ಬಂಧುಗಳು ಅಲ್ಲಿದ್ದಾರೆ. ಬ್ರಹ್ಮಕಲಶ ಸಂದರ್ಭದಲ್ಲಿ ಅಲ್ಲಿನವರ ಸುರಕ್ಷತೆಗೆ ನಾವೆಲ್ಲ ಸೂರ್ಯದೇವರಲ್ಲಿ ಪ್ರಾರ್ಥಿಸೋಣ. ಶಾಂತಿಯ ವಾತಾವರಣ ನಿರ್ಮಾಣವಾಗಿ ಸಾತ್ವಿಕ ಶಕ್ತಿ ವಿಜೃಂಭಿಸಲಿ.