ಕುಂದಾಪುರ: ಕುಂದಾಪುರದ ಸಂಗಮ್- ಫನ್ನೀರ್ ರಸ್ತೆಯಲ್ಲಿ ಭಾನುವಾರ ರಾತ್ರಿ 12 ಗಂಟೆ ಸುಮಾರಿಗೆ ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಸವಾರನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆ.ಗಣೇಶ ಪ್ರಭು ಎಂಬುವರು ಸಂಗಮ್ ಕಡೆಯಿಂದ ಫನ್ನೀರ್ ಕಡೆಗೆ ದ್ವಿಚಕ್ರ ವಾಹನನಲ್ಲಿ ಹೋಗುತ್ತಿರುವಾಗ ಅಕ್ಷಿತ್ ಎಂಬುವರು ಫನ್ನೀರ್ ಕಡೆಯಿಂದ ಸಂಗಮ್ ಕಡೆಗೆ ಸಹಸವಾರನೊಂದಿಗೆ ಚಲಾಯಿಸಿಕೊಂಡು ಬಂದ ಬೈಕ್ ಮೈಲಾರೇಶ್ವರ ದೇವಸ್ಥಾನದ ಬಳಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಗಣೇಶ್ ಪ್ರಭು ಗಂಭೀರವಾಗಿ ಗಾಯಗೊಂಡಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಅಕ್ಷಿತ್ ಹಾಗೂ ಸಹ ಸವಾರ ಸುಜನ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.