ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ.ವಿನಾಯಕ ಭಟ್ ಗಾಳಿಮನೆ ವಾತನಾಡಿದರು. ಪ್ರಮುಖರಾದ ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಮೊದಲಾದವರಿದ್ದರು.
ಕಾರ್ಕಳ: ದ್ವೇಷ, ಅಸೂಯೆ, ಅಹಂಕಾರಗಳೇ ಸಂರ್ಷಕ್ಕೆ ಮೂಲ. ದುರ್ಯೋಧನನಿಗೆ ಪಾಂಡವರ ಮೇಲೆ ಬಾಲ್ಯದಿಂದಲೇ ಮೈಮನಸ್ಸು ಹುಟ್ಟಿ ಅದು ನಾನಾ ಕಾರಣಗಳಿಂದ ಬೆಳೆಯುತ್ತಲೇ ಹೋಗುತ್ತದೆ. ಭೀಮನನ್ನು ವಿಷ ಪ್ರಾಶನದಿಂದ ಕೊಲ್ಲಲ್ಲು ಪ್ರಯತ್ನಿಸಿದರೂ ಆತ ನೂರಾನೆ ಬಲದೊಂದಿಗೆ ಮರಳಿ ಬರುತ್ತಾನೆ. ಮಹಾಭಾರತದ ಭಾವದೀಪ ಆರದಂತೆ ನೋಡಿಕೊಂಡ ಭೀಷ್ಮ ಮಹಾತ್ಮರಿಗೂ ಅವರ ವೈಷಮ್ಯವನ್ನು ಕೊನೆಗಾಣಿಸಲು ಸಾಧ್ಯವಾಗಲಿಲ್ಲ ಎಂದು ವಿದ್ವಾಂಸ ಡಾ.ವಿನಾಯಕ ಭಟ್ ಗಾಳಿಮನೆ ಹೇಳಿದರು.
ಕಾಂತಾವರ ಕನ್ನಡ ಸಂ, ಕಾಂತಾವರ ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಟಕದ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತಿ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ವಾಲೆಯ ಪಂಚಮ ಸೋಪಾನದಲ್ಲಿ ‘ಕುಲವೊಂದು ಕವಲೆರಡು’ ಎಂಬ ಕುರಿತಾಗಿ ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಾತನಾಡಿದರು.
ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್ ವೈಸ್‌ವಾರ್ಷೇಲ್ ರಮೇಶ್ ಕಾರ್ಣಿಕ್, ಅ.ಭಾ.ಸಾ.ಪ. ದ.ಕ. ಜಿಲ್ಲಾ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ, ಪ್ರಾಯೋಜಕಿ ಪಲ್ಲವಿ ಕೀರ್ತನ್ ಕುವಾರ್ ಉಪಸ್ಥಿತರಿದ್ದರು. ಸದಾನಂದ ನಾರಾವಿ ಸ್ವಾಗತಿಸಿದರು. ಜಯಶ್ರೀ ಆದಿರಾಜ ಅಜ್ರಿ ಪ್ರಾರ್ಥಿಸಿದರು. ಡಾ.ಸುಮತಿ ಪಿ. ನಿರೂಪಿಸಿದರು. ಸುಲೋಚನಾ ಬಿ.ವಿ. ವಂದಿಸಿದರು.