ಅದೃಷ್ಟಶಾಲಿ ವಿಜೇತರ ಆಯ್ಕೆ ಪ್ರಕ್ರಿಯೆ ಹರ್ಷ ಮಳಿಗೆಯಲ್ಲಿ ನಡೆಯಿತು.
ಉಡುಪಿ: ಪ್ರಸಿದ್ಧ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಹರ್ಷ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ 'ರಾಯಲ್ ರಿಪಬ್ಲಿಕ್ ಡೀಲ್ಸ್' ಶಾಪಿಂಗ್ ಮೇಳದಲ್ಲಿ 15,000 ರೂ.ಗಿಂತ ಹೆಚ್ಚಿನ ಮೊತ್ತದ ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಬೈಕ್ ಗೆಲ್ಲುವ ಅವಕಾಶ ಕಲ್ಪಿಸಲಾಗಿದ್ದು, ಅದೃಷ್ಟಶಾಲಿ ವಿಜೇತರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ಹರ್ಷ ಮಳಿಗೆಯಲ್ಲಿ ನಡೆಯಿತು.
ನಾಲ್ಕು ವಲಯಗಳ ನಾಲ್ವರು ಅದೃಷ್ಟಶಾಲಿ ಗ್ರಾಹಕರು 'ರಾಯಲ್ ಎನ್ಫೀಲ್ಡ್' ಬೈಕ್ ಬಹುಮಾನ ಪಡೆದಿದ್ದಾರೆ. ವಲಯ 1ರಲ್ಲಿ ಉಡುಪಿ, ಬ್ರಹ್ಮಾವರ, ಕುಂದಾಪುರ ಮಳಿಗೆಗಳು, ವಲಯ 2ರಲ್ಲಿ ಮಂಗಳೂರು, ಸುರತ್ಕಲ್ ಮತ್ತು ಪುತ್ತೂರು ಮಳಿಗೆಗಳು, ವಲಯ 3ರಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಕಲ್ಬುರ್ಗಿ ಮಳಿಗೆಗಳು, ವಲಯ 4ರಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಸಾಗರ ಮಳಿಗೆಗಳಲ್ಲಿ ಸಂಗ್ರಹಿಸಿದ ಕೂಪನ್ಗಳನ್ನು ತೆರೆದು ಗ್ರಾಹಕರ ಮೂಲಕ ನಾಲ್ಕು ವಲಯಗಳಿಂದ ತಲಾ ಒಬ್ಬರಂತೆ ನಾಲ್ವರು ವಿಜೇತರನ್ನು ಆಯ್ಕೆ ಮಾಡಲಾಗಿದೆ.
ವಲಯ 1ರಲ್ಲಿ ಜ್ಯೋತಿ ಎಸ್. (7414), ವಲಯ 2ರಲ್ಲಿ ನುಮಾನ್ (5681), ವಲಯ 3ರಲ್ಲಿ ಪ್ರವಿಣ್ (4768), ವಲಯ 4ರಲ್ಲಿ ಗಣೇಶ್ ಟಿ.ಆರ್. (3770) ಬಹುಮಾನ ಗಳಿಸಿದ್ದಾರೆ.
ಈ ಸಂದರ್ಭದಲ್ಲಿ ಹರ್ಷ ಸಂಸ್ಥೆಯ ವಾಣಿಜ್ಯ ವಿಭಾಗ ಮುಖ್ಯಸ್ಥ ಸಿದ್ಧಾರ್ಥ್ ಪ್ರಭು, ಮಾರ್ಕೆಟಿಂಗ್ ಮುಖ್ಯಸ್ಥ ಶ್ರೀವತ್ಸ ಬಲ್ಲಾಳ್, ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಡಿಸೋಜಾ, ಸ್ಟೋರ್ ಮ್ಯಾನೇಜರ್ ಅಭಿನನ್, ಸೇಲ್ಸ್ ವಿಭಾಗದ ಸ್ಟೀವನ್ ಲೋಬೋ ಹಾಗೂ ರಿಟೇಲ್ ಕಮರ್ಷಿಯಲ್ ಆಪರೇಶನ್ಸ್ ಮ್ಯಾನೇಜರ್ ಪ್ರವಿಣ್ ಕುಮಾರ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.