ನಿವೃತ್ತ ಅಧಿಕಾರಿ ಗುರುಪುರದ ಹರಿ ಮಲ್ಲಿ ದೋಣಿಂಜೆಗುತ್ತು ಅವರಿಗೆ ಭಾನುವಾರ ಗುರುಪುರದಲ್ಲಿ ಶ್ರದ್ಧಾಂಜಲಿ ಸಭೆ ಜರುಗಿತು. ದೋಣಿಂಜೆಗುತ್ತಿನ ಪ್ರಧಾನ ಗಡಿಕಾರ ಪ್ರಮೋದ್ ಕುಮಾರ್ ರೈ, ದೋಣಿಂಜೆಗುತ್ತು ರವಿ ಶೆಟ್ಟಿ ಮೊದಲಾದವರಿದ್ದರು. 
ಉಡುಪಿ

ಹಿರಿಕಿರಿಯರಲ್ಲಿ ಆತ್ಮೀಯರಾಗಿದ್ದ ಹರಿ ಮಲ್ಲಿ

ಗುರುಪುರ: ಇತ್ತೀಚೆಗೆ ನಿಧನ ಹೊಂದಿದ ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಗುರುಪುರದ ಹರಿ ಮಲ್ಲಿ(ಬೇಬಿ) ದೋಣಿಂಜೆಗುತ್ತು ಅವರಿಗೆ ಭಾನುವಾರ ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಮುದಾಯ ಸಭಾ ಭವನದಲ್ಲಿ ಶ್ರದ್ಧಾಂಜಲಿ ಸಭೆ ಜರುಗಿತು.

ದೋಣಿಂಜೆಗುತ್ತಿನ ಪ್ರಧಾನ ಗಡಿಕಾರ ಪ್ರಮೋದ್ ಕುಮಾರ್ ರೈ ಮಾತನಾಡಿ, ಬ್ಯಾಂಕ್ ಅಧಿಕಾರಿಯಾಗಿದ್ದ ಹರಿ ಮಲ್ಲಿಯವರು ದೈವಾರಾಧನೆ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಹಿರಿಕಿರಿಯರಲ್ಲಿ ಆತ್ಮೀಯವಾಗಿ ಮಾತನಾಡುತ್ತಿದ್ದ ಅವರು, ವಿಶಾಲ ಹೃದಯವಂತಿಕೆ ಹೊಂದಿದ್ದರು ಎಂದು ಭಾವುಕರಾದರು.
ದೋಣಿಂಜೆಗುತ್ತು ರವಿ ಶೆಟ್ಟಿ(ಕತಾರ್) ಮಾತನಾಡಿ, ಬದುಕು ಜಟಕಾ ಬಂಡಿಯಂತೆ, ಅದು ಎಲ್ಲಿ ಹೋಗಿ ನಿಲ್ಲಬೇಕೋ ಅಲ್ಲಿ ಹೋಗಿ ನಿಲ್ಲುತ್ತದೆ. ಒಬ್ಬ ಕುಟುಂಬ ವ್ಯಕ್ತಿಯಾಗಿದ್ದ ಹರಿ ಮಲ್ಲಿಯವರು ಸದಾ ಸೌಮ್ಯ ಹಾಗೂ ಸರಳ ಜೀವನ ನಡೆಸಿದವರು ಎಂದರು.
ಮೂಳೂರು ಶ್ರೀ ಮುಂಡಿತ್ತಾಯ ಪರಿವಾರ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಸುಕುಮಾರ್ ಶೆಟ್ಟಿ ದೋಣಿಂಜೆಗುತ್ತು, ಡಾ.ರವಿರಾಜ ಶೆಟ್ಟಿ ಕಾಗಮೊಗರುಗುತ್ತು, ವಿಜಯಾ ಬ್ಯಾಂಕ್ ನಿವೃತ್ತ ಉದ್ಯೋಗಿ ಚಂದ್ರಹಾಸ ಕಾವ, ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಸುದರ್ಶನ ಶೆಟ್ಟಿ ಪೆರ್ಮಂಕಿ ಅವರು ಹರಿ ಮಲ್ಲಿ ಅವರ ಗುಣಗಾನ ಮಾಡಿದರು.
ಸಭೆಯಲ್ಲಿ ವೈದ್ಯನಾಥ ದರ್ಶನ ಪಾತ್ರಿ ತಿಮ್ಮ ಯಾನೆ ಚಂದ್ರಹಾಸ ಪೂಜಾರಿ ಕೌಡೂರು, ಯಕ್ಷಗಾನ ಅಕಾಡೆಮಿ ಸದಸ್ಯ ವಿನಯ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಪ್ರಶಾಂತ್ ಭಂಡಾರಿ ಸುಳ್ಯಗುತ್ತು, ಸಂಧ್ಯಾ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ರೋಹಿತಾಶ್ವ ಅಣ್ಣು ಭಂಡಾರಿ, ವಿಠಲ ಭಂಡಾರಿ ದೋಣಿಂಜೆಗುತ್ತು, ಪ್ರೇಮನಾಥ ಮಾರ್ಲ ಕಾರಮೊಗರುಗುತ್ತು, ಹರೀಶ್ ಭಂಡಾರಿ ಬಂಗ್ಲೆಗುಡ್ಡೆ, ಕಿರಣ್ ಪಕ್ಕಳ ಪೆರ್ಮಂಕಿಗುತ್ತು, ಮೋಹನದಾಸ ಶೆಟ್ಟಿ ಕೊಟ್ಟಾರ, ಯಶವಂತ ಕೋಟ್ಯಾನ್, ಬಾಬು ಸಾಲ್ಯಾನ್, ನಾಗೇಶ್ ಕುಲಾಲ್ ಹಾಗೂ ಕುಟುಂಬಿಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ವಿಜಯಾ ಬ್ಯಾಂಕ್ ನಿವೃತ್ತ ಉದ್ಯೋಗಿ ಸುಧಾಕರ ಶೆಟ್ಟಿ ದೋಣಿಂಜೆಗುತ್ತು ನಿರೂಪಿಸಿದರು.