ವಾಮದಪದವಿನಲ್ಲಿ 2076ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನವನ್ನು ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಿದರು. ನವೀನ್‌ಚಂದ್ರ ಶೆಟ್ಟಿ, ದಿನೇಶ್ ಡಿ., ರೋನಾಲ್ಡ್ ಡಿಸೋಜ, ದೇವಪ್ಪ ಕುಲಾಲ್, ಹರೀಂದ್ರ ಪೈ ಮೊದಲಾದವರಿದ್ದರು.  
ಉಡುಪಿ

ಮದ್ಯವಿಲ್ಲದ ಕುಟುಂಬದಲ್ಲಿ ಸಂತೋಷ ನೆಲೆ

ಬಂಟ್ವಾಳ: ಮದ್ಯಪಾನ ತ್ಯಜಿಸುವುದು ಎಂದರೆ ಕೇವಲ ಒಂದು ಕೆಟ್ಟ ಅಭ್ಯಾಸ ಬಿಡುವುದಲ್ಲ ಅದು ಕುಟುಂಬದ ಮೇಲಿನ ಪ್ರೀತಿ, ಜವಾಬ್ದಾರಿ ಮತ್ತು ಕಾಳಜಿ ವ್ಯಕ್ತಪಡಿಸುವ ಮಹತ್ವದ ನಿರ್ಧಾರ. ಮದ್ಯವಿಲ್ಲದ ಮನೆಯಲ್ಲಿ ಪ್ರೀತಿ ಹೆಚ್ಚುತ್ತದೆ, ಆರೋಗ್ಯ ಸುಧಾರಿಸುತ್ತದೆ, ಮಕ್ಕಳಿಗೆ ಉತ್ತಮ ವಾತಾವರಣ ದೊರೆಯುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.
ವಾಮದಪದವು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಾಮದಪದವು ಬಸ್ತಿಕೋಡಿಯ ಪದ್ಮಾವತಿ ಸಭಾಭವನದಲ್ಲಿ 2076ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಂದು ಕುಟುಂಬ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಹರೀಂದ್ರ ಪೈ, ಸಮಿತಿ ಪದಾಧಿಕಾರಿಗಳಾದ ಅಮ್ಮು ರೈ, ಸದಾನಂದ ನಾವೂರು, ಅರ್ಕಕೀರ್ತಿ ಇಂದ್ರ, ಗಣೇಶ್ ಪ್ರಭು, ಪ್ರಕಾಶ್ ಗಟ್ಟಿ, ಯತೀಶ್, ಸದಾನಂದ ಶೀತಲ್, ಪ್ರವೀಣ್ ಕಾಡಬೆಟ್ಟು, ಡಾ.ರಾಮಕೃಷ್ಣ, ಶಿಬಿರಾಧಿಕಾರಿ ರಮೇಶ್ ಉಪಸ್ಥಿತರಿದ್ದರು.
ಧರ್ಮಸ್ಥಳ ಯೋಜನೆ ತಾಲೂಕು ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ನಿರೂಪಿಸಿದರು. ಶಿಬಿರದಲ್ಲಿ 63 ಮಂದಿ ಪಾನಮುಕ್ತರಾಗಿ ಹೊಸ ಜೀವನಕ್ಕೆ ಕಾಲಿಟ್ಟರು.