ಹನುಮಗಿರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ತೆರೆಯಲಾದ ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ದ್ವಾರಕಾ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು. ನಳಿನ್‌ಕುಮಾರ್ ಕಟೀಲು, ನನ್ಯ ಅಚ್ಯುತ ಮೂಡೆತ್ತಾಯ, ಸಾಜ ರಾಧಾಕೃಷ್ಣ ಆಳ್ವ, ಸೀತಾರಾಮ ರೈ ಕೆದಂಬಾಡಿಗುತ್ತು, ಅರುಣ್ ಕುವಾರ್ ಪುತ್ತಿಲ ಮತ್ತಿತರರು ಇದ್ದರು.
ಪುತ್ತೂರು ಗ್ರಾಮಾಂತರ: ಹನುಮಗಿರಿ ಬ್ರಹ್ಮಕಲಶೋತ್ಸವವು ದೇವರ ಅನುಗ್ರಹದೊಂದಿಗೆ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂತೆ ಹಾಗೂ ಹಿಂದೂ ಸಮಾಜಕ್ಕೆ ಪ್ರೇರಣೆಯಾಗುವಂತೆ ಮೂಡಿಬರಲಿ ಎಂದು ದ್ವಾರಕಾ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಆಶಿಸಿದರು.
ಹನುಮಗಿರಿ ಕ್ಷೇತ್ರದಲ್ಲಿ ಏ.9ರಿಂದ 12ರ ತನಕ ನಡೆಯಲಿರುವ ಕ್ಷೇತ್ರದ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತೆರೆಯಲಾದ ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ಕುವಾರ್ ಕಟೀಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಹ್ಮಕಲಶೋತ್ಸವ ಕಾರ್ಯವು ವೇಗ ಮತ್ತು ಶಕ್ತಿ ಕೊಡುವ ನಿಟ್ಟಿನಲ್ಲಿ ಕಾರ್ಯಾಲಯ ಆರಂಭಿಸಲಾಗಿದೆ ಎಂದರು.
ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಅರುಣ್‌ಕುಮಾರ್ ಪುತ್ತಿಲ, ಗಜಾನನ ಶಾಲೆಯ ಶಿಕ್ಷಕಿ ಸೌಮ್ಯಾ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಸೀತಾರಾಮ ರೈ ಕೆದಂಬಾಡಿಗುತ್ತು, ರವಿಕಿರಣ್ ಶೆಟ್ಟಿ ಬೆದ್ರಾಡಿ, ಪ್ರಧಾನ ಕಾರ್ಯದರ್ಶಿ ನಹುಷಾ ಪಳನೀರು, ಸುಬ್ಬಪ್ಪ ಪಾಟಾಳಿ ಪಟ್ಟೆ, ಗೌರವ ಸಲಹೆಗಾರ ಶ್ರೀಕೃಷ್ಣ ಭಟ್ ಮುಂಡ್ಯ, ಕಾರ್ಯದರ್ಶಿ ಚಂದ್ರಶೇಖರ್ ಆಳ್ವ, ಧರ್ಮದರ್ಶಿ ಶಿವರಾಮ ಶರ್ಮ ಕತ್ರಿಬೈಲು, ಪದಾಧಿಕಾರಿಗಳಾದ ಆನಂದ ರೈ ಸಾಂತ್ಯ, ರಮೇಶ್ ಪೂಜಾರಿ ಮುಂಡ್ಯ, ಜತ್ತಪ್ಪ ಗೌಡ ಕೊಂಕಣಿಗುಂಡಿ, ಪದ್ಮನಾಭ ಗೌಡ ಮಡ್ಯಲಮಜಲು, ಸತ್ಯಪ್ರಕಾಶ್ ಕುಂಟಿಕಾನ, ಶೇಖರ್ ಮುಂಡ್ಯ, ರಾಮಣ್ಣ ನಾಯ್ಕ ಕುತ್ಯಾಳ, ಅಚ್ಚುತ ಮಣಿಯಾಣಿ, ರವಿಪ್ರಸಾದ್ ರೈ ಕಾವು ಮತ್ತಿತರರು ಇದ್ದರು. ನನ್ಯ ಅಚ್ಚುತ ಮೂಡೆತ್ತಾಯ ಸ್ವಾಗತಿಸಿದರು. ಶಿವರಾಮ ಪಿ.ಈಶ್ವರಮಂಗಲ ವಂದಿಸಿದರು.