ಉಡುಪಿಯ ಶೆಟ್ಟಿಬೆಟ್ಟು ಪ್ರೌಢಶಾಲೆ ಹಾಗೂ ಆತ್ರಾಡಿ ಶಾಲೆಯ ಗ್ರಂಥಾಲಯಗಳಿಗೆ ರವಿರಾಜ್ ಎಚ್.ಪಿ. ಪುಸ್ತಕ ಹಸ್ತಾಂತರಿಸಿದರು. ಸಂದೀಪಕುಮಾರ್, ಜನಾರ್ದನ್ ಕೊಡವೂರು, ರಾಜೇಶ್ ಡಿ. ಶೆಣೈ, ರಾಮಕೃಷ್ಣ ನಾಯಕ್, ಸರಸ್ವತಿ, ರಂಜಿನಿ ವಸಂತ್ ಇತರರಿದ್ದರು.
* ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಕರೆ
* ಶೆಟ್ಟಿಬೆಟ್ಟು, ಆತ್ರಾಡಿಯಲ್ಲಿ ಸಾಕ್ಷರತಾ ಮಾಸಾಚರಣೆ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದಿಂದ 'ಮನೆಯೇ ಗ್ರಂಥಾಲಯ' ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆದಿದೆ. 220ಕ್ಕೂ ಅಧಿಕ ಗ್ರಂಥಾಲಯ ರೂಪಿಸಿ, ಪುಸ್ತಕಗಳನ್ನು ನೀಡಲಾಗಿದೆ. ಶಾಲೆಗಳಲ್ಲಿಯೂ ಸಹ ಕನ್ನಡ ಭಾಷೆ ಮತ್ತು ಸಾಹಿತ್ಯ ಚಟುವಟಿಕೆ ನಡೆಯುತ್ತಿರುವುದು ಸಂತಸದ ವಿಚಾರ. ವಿದ್ಯಾರ್ಥಿಗಳು ಮೊಬೈಲ್ ಗೀಳು ಹೆಚ್ಚಿಸಿಕೊಳ್ಳುವ ಬದಲು ಓದುವ ಹವ್ಯಾಸ ಬೆಳೆಸಿಕೊಳ್ಳಲಿ ಎಂದು ಕಸಾಪ ಉಡುಪಿ ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಕರೆ ನೀಡಿದರು.
ಉಡುಪಿ ಪರ್ಕಳದ ರೋಟರಿ ಐಸಿರಿ ವತಿಯಿಂದ ಕಸಾಪ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಶೆಟ್ಟಿಬೆಟ್ಟು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಸಾಕ್ಷರತಾ ಮಾಸಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಂಥಾಲಯಗಳಿಗೆ ಪುಸ್ತಕ ಹಸ್ತಾಂತರಿಸಿ ಮಾತನಾಡಿದರು.
ರೋಟರಿ ಐಸಿರಿ ಪರ್ಕಳ ಅಧ್ಯಕ್ಷ ಸಂದೀಪಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಕಾರ್ಯದರ್ಶಿ ರಾಜೇಶ್ ಡಿ. ಶೆಣೈ, ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕರಾದ ರಾಮಕೃಷ್ಣ ನಾಯಕ್ ಮತ್ತು ಸರಸ್ವತಿ ಮಾತನಾಡಿ, ಕೃತಜ್ಞತೆ ಸಲ್ಲಿಸಿದರು.
ಘಟಕದ ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸಾಂಸತಿಕ ಕಾರ್ಯದರ್ಶಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ದೀಪಾ ಕರ್ಕಿ, ರೋಟರಿ ಲೀಡರ್ಶಿಪ್ ಇನ್ಸ್ಟಿಟ್ಯೂಟ್ ಜಿಲ್ಲಾ ಸಭಾಪತಿ ಮಂಜುನಾಥ್ ಉಪಾಧ್ಯ, ಉಪಾಧ್ಯಕ್ಷ ಕೆ.ಪ್ರಕಾಶ್ ಶೆಣೈ, ಕ್ರೀಡಾ ಸಂಯೋಜಕ ಅಶೋಕ್ ನಾಯಕ್ ಮತ್ತು ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.