ಶ್ರೀ ರಾಮ ಸೇವಾ ಸಂ ಪ್ರವರ್ತಿತ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶ್ರೀ ರಾಮ ಶಿಶು ಮಂದಿರ ಶಾಲೆಗೆ ಕ್ರೀಡಾ ಸಾಮಗ್ರಿ, ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಸುಜಾತಾ, ಪ್ರಕಾಶ ಪೈ, ರವೀಂದ್ರ ಪೈ, ನಿರಂಜನ ಕಾಮತ್ ಮತ್ತಿತರರಿದ್ದರು.
ಕುಂದಾಪುರ: ಶ್ರೀ ರಾಮ ಸೇವಾ ಸಂ ಪ್ರವರ್ತಿತ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶ್ರೀ ರಾಮ ಶಿಶು ಮಂದಿರ ಶಾಲೆಗೆ ಮಣಿಪಾಲದ ಟಿ.ಎ.ಪೈ. ಮಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಹಳೇ ವಿದ್ಯಾರ್ಥಿ ಸಂದ ವತಿಯಿಂದ ಕೊಡುಗೆಯಾಗಿ ನೀಡಿದ ಸುಮಾರು 30,000 ರೂ. ಮೌಲ್ಯದ ಕ್ರೀಡಾ ಸಾಮಗ್ರಿ, ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ಗುರುವಾರ ನಡೆಯಿತು.
ಹಳೇ ವಿದ್ಯಾರ್ಥಿ ಸಂದ ಕಾರ್ಯದರ್ಶಿ ರಾಜೇಂದ್ರ ಕಾಮತ್ ಮಾತನಾಡಿ, ಅನೇಕ ವರ್ಷಗಳಿಂದ ಈ ಶಾಲೆಗೆ ಹಲವು ಬಾರಿ ಭೇಟಿ ನೀಡಿದ್ದು, ಇಂದಿನ ಆಧುನಿಕ ಶಿಕ್ಷಣಕ್ಕೆ ಅನುಕೂಲವಾಗುವಂತಹ ಆಟಿಕೆಗಳನ್ನು ನೀಡಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ನಿರ್ವಹಣೆ ವಾಡಬೇಕು ಎಂದರು.
ಅಸೋಸಿಯೇಷನ್‌ನ ಅಧಿಕಾರಿ ಡಾ.ಮಂಜುನಾಥ್ ಶುಭ ಹಾರೈಸಿದರು. ಅಸೋಸಿಯೇಷನ್ ಅಧಿಕಾರಿ ಸುಜಾತ, ಶ್ರೀ ರಾಮ ಸೇವಾ ಸಂ ಉಪಾಧ್ಯಕ್ಷ ಪ್ರಕಾಶ ಪೈ, ಜತೆ ಕಾರ್ಯದರ್ಶಿ ರವೀಂದ್ರ ಪೈ, ಕೋಶಾಧಿಕಾರಿ ನಿರಂಜನ ಕಾಮತ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಗದೀಶ ಭಟ್, ಉಜ್ವಲ ಕಾಮತ್, ಶಿಶು ಮಂದಿರ ಶಿಕ್ಷಕಿ ಸಹನಾ, ಸಹಾಯಕಿ ಉಷಾ, ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಶಂಕರ ಕಾಮತ್ ಸ್ವಾಗತಿಸಿದರು. ಸದಾನಂದ ಪೈ ನಿರೂಪಿಸಿ, ವಂದಿಸಿದರು.