ಹಂಪಿಯಿಂದ ಧರ್ಮಸ್ಥಳಕ್ಕೆ 380 ಕಿ.ಮೀ. ಸೈಕಲ್ ಮೂಲಕ ಆಗಮಿಸಿದ 65 ಯುವಕರ ತಂಡ.  
ಉಡುಪಿ

ಹಂಪಿ ವಿದ್ಯಾರ್ಥಿಗಳಿಂದ ಧರ್ಮಸ್ಥಳಕ್ಕೆ ಸೈಕಲ್ ಜಾಥಾ

ಬೆಳ್ತಂಗಡಿ: ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಿಂದ 65 ಮಂದಿ ಯುವಕರು ಸೈಕಲ್ ಮೂಲಕ ಸುಮಾರು 380 ಕಿ.ಮೀ. ದೂರವನ್ನು ಕ್ರಮಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಭಕ್ತಿ, ಆರೋಗ್ಯ ಹಾಗೂ ಶಿಸ್ತಿನ ಸಂದೇಶ ಸಾರಿದರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಯುವಕರನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕಾರ್ಯದರ್ಶಿ ಎ.ವಿ.ಶೆಟ್ಟಿ ಸ್ವಾಗತಿಸಿದರು.

36 ವಷರ್ಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸೈಕಲ್ ಭಕ್ತಿ ಜಾಥಾವನ್ನು ಹಿರಿಯರು ಆರಂಭಿಸಿದ್ದು, ಆ ಪರಂಪರೆಯನ್ನು ಇಂದಿನ ಯುವಕರು ಅಷ್ಟೇ ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ನೂರಾರು ಗ್ರಾಮಗಳ ಮೂಲಕ ಸಾಗುವ ಈ ಸಾಕಲ್ ಜಾಥಾ ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಸದಾಚಾರದ ಕುರಿತು ಜಾಗೃತಿ ಮೂಡಿಸುತ್ತಿದೆ.
ಯುವಕರು ಆರೋಗ್ಯವಂತರಾಗಿರಬೇಕು, ದುಶ್ಚಟಗಳಿಂದ ದೂರವಿರಬೇಕು ಹಾಗೂ ಶಿಸ್ತು-ಭಕ್ತಿಯ ಜೀವನ ನಡೆಸಬೇಕು ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ಜಾಥಾದ ಪ್ರಮುಖ ಉದ್ದೇಶವಾಗಿದೆ. ಧರ್ಮಸ್ಥಳಕ್ಕೆ ಆಗಮಿಸಿದ ಯುವಕರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಳಿಕ ತಮ್ಮೂರಿನತ್ತ ತೆರಳಿದರು.