ಉಡುಪಿ ಹಿರಿಯಡ್ಕದ ಕೆಪಿಎಸ್ ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಡಾ. ಎನ್.ಎಸ್. ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ಕುಯಿಲಾಡಿ ಸುರೇಶ್ ನಾಯಕ್, ಪ್ರೊ. ಸಖರಾಮ ಸೋಮಯಾಜಿ, ಮಂಜುನಾಥ್ ಭಟ್, ಪ್ರಕಾಶ್ ಪ್ರಭು, ಬಿ.ಎಲ್. ವಿಶ್ವಾಸ್, ವೀಣಾ ಡಿ. ನಾಯಕ್, ವಿಜಯ್ ಶೆಟ್ಟಿ ಇದ್ದರು.
* ಕೃಷಿ ಅರ್ಥಶಾಸ್ತ್ರಜ್ಞ ಡಾ. ಎನ್.ಎಸ್. ಶೆಟ್ಟಿ ಅಭಿಮತ
* ಹಿರಿಯಡ್ಕ ಕೆಪಿಎಸ್ ನಲ್ಲಿ ಗುರುವಂದನಾ ಕಾರ್ಯಕ್ರಮ
ಸಮಾಜಕ್ಕೆ ನೀಡಿ ಕೊಡುಗೆ
ತಾಯಿ, ಮಾತ್ರಭೂಮಿಯ ಮರೆಯದಿರಿ
ಹಿರಿಯ ಉಪನ್ಯಾಸಕಿ ವೀಣಾ ಡಿ. ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ಉಪನ್ಯಾಸಕಿ ಗೀತಾಕುಮಾರಿ ಟಿ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಜಯಶ್ರೀ ಪರಿಚಯಿಸಿದರು. ಉಪನ್ಯಾಸಕಿ ಹೇಮಲತಾ ಮತ್ತು ಸ್ಮಿತಾ ಸನ್ಮಾನಿತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಮಹೇಶ್ ವಂದಿಸಿದರು.
ಇಂದಿನ ಯುವಜನತೆಯಲ್ಲಿ ಮೂಲ ಪ್ರಾಯೋಗಿಕ ಕೌಶಲ ಹಾಗೂ ಹಣಕಾಸು ಸಾಕ್ಷರತೆಯ ಕೊರತೆಯಿದೆ. ಶೈಕ್ಷಣಿಕ ಹಂತದಲ್ಲೇ ಅವುಗಳನ್ನು ಬೆಳೆಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆ (ಎಐ)ಗೆ ಮಿದುಳಿರಬಹುದು. ಆದರೆ, ಹೃದಯವಿಲ್ಲ. ಹೀಗಾಗಿ ಎಐನಿಂದ ಕರುಣೆ, ಸ್ಫೂರ್ತಿ ಹಾಗೂ ಭಾವನೆಗಳ ಪಾಠ ನೀಡಲು ಸಾಧ್ಯವಿಲ್ಲ. ತಂತ್ರಜ್ಞಾನದ ಸವಾಲುಗಳ ನಡುವೆಯೂ ಶಿಕ್ಷಕರು ಭವಿಷ್ಯದ ದಾರಿದೀಪವಾಗಿ ಮುಂದುವರಿಯಲಿದ್ದಾರೆ.