ಜ್ಞಾನದೀಪ ಕಾರ್ಯಕ್ರಮವನ್ನು ಮುರಳೀಧರ್ ಉದ್ಘಾಟಿಸಿದರು. ಪ್ರಮುಖರಾದ ನಂದಾ ಹರೀಶ್, ಎಂ.ಕೃಷ್ಣ ಭಟ್, ತಾರನಾಥ್ ಕೋನಡ್ಕ, ಭಾಸ್ಕರ್ ಅರ್ಗುಡಿ ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ 2005 ಬ್ಯಾಚ್‌ನ ಹಳೇ ವಿದ್ಯಾರ್ಥಿ ಸಂಘಟನೆ ಜ್ಞಾನದೀಪ ವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಜ್ಞಾನದೀಪ ಮಾರ್ಗದರ್ಶನ ಕಾರ್ಯಕ್ರಮ ಶನಿವಾರ ನಡೆಯಿತು. ಸಂಘದ ಸಂಯೋಜಕ ಮುರಳೀಧರ್ ಉದ್ಘಾಟಿಸಿದರು.
ಮುಖ್ಯಶಿಕ್ಷಕರಾದ ನಂದಾ ಹರೀಶ್, ಹಿರಿಯ ಶಿಕ್ಷಕ ಎಂ.ಕೃಷ್ಣ ಭಟ್, ಜ್ಞಾನದೀಪದ ಪ್ರಮುಖರಾದ ತಾರನಾಥ್ ಕೋನಡ್ಕ, ರವಿ ನಂದನ್, ಮನೋಜ್ ಕೈಕಂಬ, ಭಾಸ್ಕರ್ ಅರ್ಗುಡಿ, ಪ್ರಮೀಳಾ, ಸ್ಮಿತಾ, ದೀಪಿಕಾ, ಭವಾನಿಶಂಕರ್ ದೇವರಗದ್ದೆ, ಸದಾನಂದ ಭಟ್, ಹರೀಶ್ ಉಪಸ್ಥಿತರಿದ್ದರು.
60 ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ಉಚಿತ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ 6 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ ಹಸ್ತಾಂತರಿಸಲಾಯಿತು.
ಡಾ.ರಾಜೇಶ್ವರಿ ಬಾಯಿಯ ಆರೋಗ್ಯ, ವೀಣಾ ಮಹಿಳಾ ಸಬಲೀಕರಣ ಮತ್ತು ಸ್ವಉದ್ಯೋಗ, ಸುಜಿತ್ ಆಯುರ್ವೇದ ಮತ್ತು ಪಂಚಕರ್ಮದ ಮಹತ್ವ, ವಿಘ್ನೇಶ್ ಕಾಮತ್ ಪ್ರತಿಭಾನ್ವೇಷಣೆ ಹಾಗೂ ಸಂಪನ್ಮೂಲಗಳ ಸದ್ಬಳಕೆ, ಸದಾನಂದ ಭಟ್ ಆಹಾರ ಮತ್ತು ಹೋಟೆಲ್ ಉದ್ಯಮದಲ್ಲಿ ವೃತ್ತಿ ಅವಕಾಶ ಹಾಗೂ ಮುರಳೀಧರ ಕನಸಿನಿಂದ ಸಾಧನೆಯತ್ತ ಸಾಗುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನೆರವೇರಿತು.