ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಜಾತ್ರೋತ್ಸವ ಪ್ರಯುಕ್ತ ಭಕ್ತರಿಂದ ಸಮರ್ಪಿಸಿದ ಹಸಿರುವಾಣಿ ಹೊರೆಕಾಣಿಕೆಗೆ ಪೂಜೆ ನೆರವೇರಿತು. ನೀರಜ್ ಕುವಾರ್ ರೈ, ಸುನಿತ್‌ರಾಜ್ ಶೆಟ್ಟಿ, ಯತೀಶ್ ಗುಂಡಿಜೆ ಇತರರಿದ್ದರು.
ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ಬೆಳಗ್ಗೆ ಶಾಲಾ ವಿದ್ಯಾರ್ಥಿಗಳಿಂದ, ಊರವರಿಂದ ಹಸಿರುವಾಣಿ ಸಮರ್ಪಣೆಗೊಂಡಿತು.
ಗ್ರಾಮದ ವಿವಿಧೆಡೆಗಳಿಂದ ಆಗಮಿಸಿದ ಹೊರಕಾಣಿಕೆ ವಾಹನಗಳನ್ನು ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಬರವಾಡಿಕೊಳ್ಳಲಾಯಿತು. ಬಳಿಕ ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಸಾಗಿ ದೇವರಿಗೆ ಅರ್ಪಿಸಲಾಯಿತು. ಪವಿತ್ರಪಾಣಿ ವೆಂಟ್ರಮಣ ಕುದ್ರೆತ್ತಾಯ ಹೊರೆಕಾಣಿಕೆಗೆ ಪೂಜೆ ನೆರವೇರಿಸಿದರು. ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಪೂಜಾ ವಿಧಿವಿಧಾನ ನೆರವೇರಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುವಾರ್ ರೈ ಆರುವಾರ ಬಾಳಿಕೆ, ಸದಸ್ಯರಾದ ಸುನಿತ್‌ರಾಜ್ ಶೆಟ್ಟಿ, ಯತೀಶ್ ಗುಂಡಿಜೆ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸೀಗೆತ್ತಡಿ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈವಾರ್, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೋರಿಕ್ಕಾರು, ಪ್ರಧಾನ ಕಾರ್ಯದರ್ಶಿ ಕೊರಗಪ್ಪ ಗೌಡ ಮುಂಡೈವಾರ್, ಉಪಾಧ್ಯಕ್ಷರಾದ ಮೋಹನ್‌ದಾಸ್ ಶೆಟ್ಟಿ ಬಡಿಲ, ಸಂಜೀವ ಗೌಡ ಪರಂಗಾಜೆ, ಶ್ರೀನಿವಾಸ ಗೌಡ ಪಲ್ಲಡ್ಕಪಟ್ಟೆ, ರಾಜೀವ ಗೌಡ ಪೊಸಲಕ್ಕೆ, ಗಣೇಶ್ ಎರ್ಮಡ್ಕ, ಜತೆ ಕಾರ್ಯದರ್ಶಿಗಳಾದ ಶಶಿಕವಾರ್ ಅಂಬಾ, ಶಾಂತಾರಾಮ ಬೆಂಗದಪಡ್ಪು, ಜ್ಯೋತಿ ಕಲ್ಕಾಡಿ, ರುನಾಥ ಶೆಟ್ಟಿ ಕಲ್ಕಂಪಾಡಿ, ಸದಸ್ಯರಾದ ರವೀಂದ್ರ ಗೌಡ ಸಂಕೇಶ, ಉಮೇಶ್ ಬುಡಲೂರು, ಪರಮೇಶ್ವರ ಗೌಡ ಸಬಳೂರು, ತಿಮ್ಮಪ್ಪ ಗೌಡ ಸಂಕೇಶ, ಚಿದಾನಂದ ಪಾನ್ಯಾಲು, ಗಂಗಾಧರ ಗೌಡ ಪರಂಗಾಜೆ, ಯತೀಶ್ ಪುತ್ಯೆ, ವಸಂತ ಪೊಸಲಕ್ಕೆ, ಸುದೀಶ್ ಪಟ್ಟೆ, ಮೋಹನಚಂದ್ರ ಪಲ್ಲಡ್ಕ, ರಮೇಶ್‌ದಾಸ್ ಕಲಾಯಿ, ನಾಗೇಶ್ ನೀಲಮೆ, ವಿಶ್ವನಾಥ ಪುತ್ಯೆ, ಜನಾರ್ದನ ನಡುಗುಡ್ಡೆ, ಲಕ್ಷ್ಮಣ ಗೌಡ ಆನೆಗುಂಡಿ, ಪ್ರಕಾಶ್ ಕೆವ್ಮಾರ, ಕೃಷ್ಣಪ್ಪ ಕಾಯರಕಟ್ಟ, ರುಕ್ಮಯ್ಯ ಗೌಡ ಕಾಯರಕಟ್ಟ, ಗ್ರಾಮ ಸಂಚಾಲಕ ಭವಿತ್‌ರಾಜ್ ಪಲ್ಲಡ್ಕಪಟ್ಟೆ, ಸಹಸಂಚಾಲಕ ಪ್ರವೀಣ್‌ರಾಜ್ ಕೆ.ಎಸ್.ಕೊಲ್ಯ, ವ್ಯವಸ್ಥಾಪನಾ ಸಮಿತಿ ವಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಇತರರಿದ್ದರು.