ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆ ಪಳ್ಳತ್ತಡ್ಕದಲ್ಲಿ ತೀರಾ ನಾದುರಸ್ತಿಯಲ್ಲಿರುವುದು.  
ಉಡುಪಿ

ರಸ್ತೆ ಅಭಿವೃದ್ಧಿಗೆ ಗ್ರೀನ್‌ಸಿಗ್ನಲ್

ಇಂದಿರಾ ಎನ್ ಕೆ
ಪುರುಷೋತ್ತಮ ಪೆರ್ಲ ಕಾಸರಗೋಡು
ಕೇರಳದಲ್ಲಿ ಐಕ್ಯರಂಗ ಸರ್ಕಾರ ರಚನೆಯಾದ ಬೆನ್ನಲ್ಲೇ ಚೆರ್ಕಳ-ಕಯಿತ್ಕು ಅಂತಾರಾಜ್ಯ ಸಂಪರ್ಕದ ಚೆರ್ಕಳದಿಂದ ಉಕ್ಕಿನಡ್ಕ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೊನೆಗೂ ಹಸಿರು ನಿಶಾನೆ ದೊರೆತಿದೆ.
ಎಡರಂಗ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೊಂಡ ಟೆಂಡರ್‌ಗೆ ಈಗ ವೇಗ ದೊರೆತಿದ್ದು, ಚೆರ್ಕಳದಿಂದ ಉಕ್ಕಿನಡ್ಕ ತನಕ 29.83 ಕೋಟಿ ರೂ. ಮೊತ್ತದಲ್ಲಿ 19 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ಲಭಿಸಿದೆ.
ಕಾಸರಗೋಡು ಶಾಸಕ ವಾಹಿನ್ ಹಾಜಿ ಅವರು ಕೆಐಐಎಫ್‌ಬಿ(ಕಿಫ್‌ಬಿ) ಸಿಇಒ ಮಿನಿ ಆ್ಯಂಟನಿ, ಕೆಆರ್‌ಎಫ್‌ಬಿ ಯೋಜನಾ ನಿರ್ದೇಶಕ ಅಶೋಕ್ ಕುವಾರ್ ಅವರೊಂದಿಗೆ ರಸ್ತೆ ಅಭಿವೃದ್ಧಿ ಕುರಿತು ಚರ್ಚಿಸಿ ಶೀಘ್ರವೇ ಕಾಮಗಾರಿ ಆರಂಭಿಸುವಂತೆ ಕೋರಿದ್ದಾರೆ.
ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ ತಾಂತ್ರಿಕ ಅನುಮೋದನೆ ದೊರೆಯದ ಕಾರಣ ಚೆರ್ಕಳ-ಕಲ್ಲಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿತ್ತು. ವರ್ಷಗಳ ಹಿಂದೆಯಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆದಿದ್ದರೂ ಕಾಮಗಾರಿ ಕಳಪೆಯಾಗಿರುವ ಆರೋಪ ಕೇಳಿಬಂದಿತ್ತು. ಗುತ್ತಿಗೆದಾರನ ನಿರ್ಲಕ್ಷೃ, ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿತ್ತು.

ಸಾಂಕೇತಿಕ ಹರತಾಳ

ಚೆರ್ಕಳದಿಂದ ಬದಿಯಡ್ಕ ತನಕ ರಸ್ತೆಯಲ್ಲಿನ ಬೃಹತ್ ಹೊಂಡಗಳನ್ನು ತೇಪೆ ಕಾಮಗಾರಿ ನಡೆಸಿ ಮುಚ್ಚಲಾಗಿತ್ತು. ಅಲ್ಲಿಂದ ಉಕ್ಕಿನಡ್ಕ ತನಕ ರಸ್ತೆ ತೀರಾ ಹದಗೆಟ್ಟಿದ್ದು ರಸ್ತೆ ದುರಸ್ತಿಗೆ ಆಗ್ರಹಿಸಿ ಖಾಸಗಿ ಬಸ್ ವಾಲಿಕರು ಮತ್ತು ಕಾರ್ಮಿಕರು ಒಂದು ದಿನದ ಸಾಂಕೇತಿಕ ಹರತಾಳವನ್ನೂ ನಡೆಸಿದ್ದರು. ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಆದರೆ ರಸ್ತೆ ಅವ್ಯವಸ್ಥೆಯಿಂದಾಗಿ ರೋಗಿಗಳು ಹಾಗೂ ವಾಹನ ಚಾಲಕರು ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ.
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಎರಡು ವರ್ಷಗಳಿಂದ ಮರಳು, ಕಲ್ಲು ಹೊತ್ತ ಭಾರಿ ವಾಹನಗಳ ಸತತ ಸಂಚಾರದಿಂದಾಗಿ ರಸ್ತೆಯ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ದುರಸ್ತಿ ಮಾಡಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಕಾಮಗಾರಿಯನ್ನು ಶೀಘ್ರವೇ ಆರಂಭಿಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚೆರ್ಕಳ-ಕಲ್ಲಡ್ಕ ರಸ್ತೆಯ ಚೆರ್ಕಳದಿಂದ ಉಕ್ಕಿನಡ್ಕ ತನಕ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 29.83 ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮತಿಯೊಂದಿಗೆ ತಾಂತ್ರಿಕ ಅನುಮತಿಯೂ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಕಡಿಮೆ ಮೊತ್ತದ ಬಿಡ್ ಹಾಕಿದವರಿಗೆ ಗುತ್ತಿಗೆ ನೀಡಲು ಯೋಜನೆ ರೂಪಿಸಲಾಗಿತ್ತು. ಚುನಾವಣೆ ೋಷಣೆಯಾದ ಕಾರಣ ಕಾಮಗಾರಿ ಆರಂಭಿಸಲು ವಿಳಂಬವಾಗಿತ್ತು.

— ಸಿ.ಜೆ.ಕೃಷ್ಣನ್, ಸಹಾಯಕ ಮಹಾ ಅಭಿಯಂತ, ಕಿಫ್‌ಬಿ ಕಾಸರಗೋಡು