ರಮೇಶ್ ಪೂಜಾರಿ ಮನೆಯಂಗಳದಲ್ಲಿ ಚಾಪೆ ನೇಜಿ ಸಿದ್ಧಪಡಿಸಿರುವುದು.
ಕರಾವಳಿಯಲ್ಲಿ ಭತ್ತದ ಕೃಷಿಯಿಂದ ರೈತರು ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿ ಕಟಪಾಡಿ ಸಹಕಾರಿ ಸಂವೊಂದರ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಇನ್ನಂಜೆ ಅಜಿಲಕಾಡಿನ ರಮೇಶ್ ಪೂಜಾರಿ ಮನೆಯಂಗಳದಲ್ಲಿಯೇ ಚಾಪೆ ನೇಜಿ ತಯಾರಿಸಿ ಹಡಿಲು ಭೂಮಿ ಸಹಿತ 6 ಎಕರೆ ಜಮೀನಿನಲ್ಲಿ ಬೇಸಾಯ ವಾಡಿ ಗಮನ ಸೆಳೆದಿದ್ದಾರೆ.
ನೆರೆಹೊರೆಯವರ, ಸಂಬಂಧಿಗಳ ಸುವಾರು 4 ಎಕರೆಗೂ ಮಿಕ್ಕಿದ ಹಡಿಲು ಬಿದ್ದ ಗದ್ದೆಯನ್ನು ಹಾಗೂ ಮನೆಯ 2 ಎಕರೆ ಗದ್ದೆಯನ್ನು ಮನೆಯಂಗಳದಲ್ಲಿ ಚಾಪೆ ನೇಜಿಯನ್ನು ಸ್ವತಃ ಸಿದ್ಧಪಡಿಸಿ ಯಾಂತ್ರೀಕೃತ ಬೇಸಾಯದ ಮೂಲಕ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.
2025ರ ಡಿಸೆಂಬರ್ ತಿಂಗಳಲ್ಲಿಯೇ ತನ್ನ ಗದ್ದೆಯನ್ನು ಉಳುಮೆ ವಾಡಿ, 2026ರ ಮೇ ತಿಂಗಳಲ್ಲಿ ಅದರ ಒಣಗಿದ ಮಣ್ಣನ್ನು ಆಯ್ದು ಚೆನ್ನಾಗಿ ಹುಡಿ ವಾಡಿ ಸಾರಿಸಿ ಕಲ್ಲುಕಸ ಮುಕ್ತಗೊಳಿಸಿ ಮನೆಯಂಗಳಕ್ಕೆ ಸಾಗಿಸಿ ಚಾಪೆ ನೇಜಿ ತಯಾರಿಗೆ ಸಿದ್ಧಪಡಿಸಿದ್ದರು.
ಮನೆಯಂಗಳದಲ್ಲಿ ಚಾಪೆ ನೇಜಿ ತಯಾರಿ
ಮನೆಯ ಕಾಂಕ್ರೀಟ್ ಅಂಗಳದಲ್ಲಿಯೇ ಸೂಕ್ತ ರೀತಿಯ ವ್ಯಾಟ್ ಸಿದ್ಧಪಡಿಸಿ, ಸೆಗಣಿ ನೀರು ಬಳಸಿಕೊಂಡು ಬಿತ್ತನೆ ವಾಡಿ ಸುವಾರು 550 ಟ್ರೇ ಚಾಪೆ ನೇಜಿಯನ್ನು ಎಂಒ4 ತಳಿಯ ಭತ್ತದ ಬೀಜ ಬಳಸಿ ಸಿದ್ಧಪಡಿಸಿದ್ದಾರೆ.
ನಾಟಿಗೆ 4 ದಿನಗಳ ಮೊದಲೇ ಉಳುಮೆ
ಚಾಪೆ ನೇಜಿ ನಾಟಿಗೂ ಮೊದಲೇ ಹಟ್ಟಿಗೊಬ್ಬರ, ಕೋಳಿ ಗೊಬ್ಬರ, ಸುಣ್ಣ, ಸುಡುಮಣ್ಣು ಸಹಿತ ಸಾವಯವ ಗೊಬ್ಬರ ಬಳಸಿದ ಗದ್ದೆಯನ್ನು 4 ದಿನಗಳ ಮೊದಲೇ ಉಳುಮೆ ವಾಡಲಾಗಿದೆ. ಆ ಬಳಿಕ ನೀರಿನಮಟ್ಟವನ್ನು ತಗ್ಗಿಸಿ ನಾಟಿ ಯಂತ್ರವನ್ನು 16 ದಿನಗಳ ಚಾಪೆ ನೇಜಿಯನ್ನು ಸಾಲು ನಾಟಿ ಕೈಗೊಂಡಿದ್ದಾರೆ. ಚಾಪೆ ನೇಜಿ ಸಿದ್ಧ ಪಡಿಸುವಾಗಲೇ ಸೂಕ್ತ ಆರೈಕೆ ವಾಡಲಾಗಿದ್ದು, 120 ದಿನಗಳ ಬಳಿಕ ಭರಪೂರ ಫಸಲು ಕೈ ಸೇರುವ ನಿರೀಕ್ಷೆಯನ್ನು ಹೊಂದಿದ್ದಾರೆ.
ಕಚೇರಿ ಕೆಲಸದ ನಡುವೆ ರಜೆಯ ದಿನಗಳನ್ನು ಬಳಸಿಕೊಂಡು ಗದ್ದೆಯ ಬದುಕು ಕಟ್ಟುವುದು ಸಹಿತ ಇತರೇ ಕೃಷಿ ಕಾಯಕಕ್ಕೆ ತೊಡಗಿಸಿಕೊಳ್ಳುತ್ತೇನೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ಇದ್ದು, ಯಾಂತ್ರೀಕೃತ ಕೃಷಿಗೆ ತೊಡಗಿಕೊಂಡಿದ್ದೇನೆ. ಉಳುಮೆ ಯಂತ್ರವನ್ನು ಹೊಂದಿದ್ದು ಸ್ವತಃ ಉಳುಮೆ ವಾಡುತ್ತೇನೆ. ಬೇಸಾಯದ ಸಮಯದಲ್ಲಿ ಬೆಳಗ್ಗೆ 3 ಗಂಟೆಯಿಂದ 7 ಗಂಟೆ ಬಳಿಕ ಸಂಜೆ ಕಚೇರಿಯಿಂದ ಹಿಂತಿರುಗಿದ ಬಳಿಕ ಗದ್ದೆಯ ಎಲ್ಲಾ ಕೆಲಸಗಳನ್ನು ವಾಡುವ ಮೂಲಕ ಆರೋಗ್ಯಯುತ ಬದುಕು ಕಾಣುವಂತಾಗಿದೆ.
— ರಮೇಶ್ ಪೂಜಾರಿ ಇನ್ನಂಜೆ ಸಾಧಕ ಕೃಷಿಕ