ಉಡುಪಿಯ ಅಜ್ಜರಕಾಡು ಕಾಲೇಜ್​ನಲ್ಲಿ ಪ್ರೊ. ಬಿ.ಎಸ್​. ಶೇರಿಗಾರ ಅವರು "ಗ್ರೀನ್​ ಹೈಡ್ರೋಜನ್​' ವಿಷಯ ಕುರಿತು ಉಪನ್ಯಾಸ ನೀಡಿದರು. 
ಉಡುಪಿ

ಪರ್ಯಾಯ ಇಂಧನವಾಗಿ 'ಗ್ರೀನ್​ ಹೈಡ್ರೋಜನ್​' ಸಹಕಾರಿ

* ಮಾಜಿ ಕುಲಪತಿ ಪ್ರೊ. ಬಿ.ಎಸ್​. ಶೇರಿಗಾರ ಅಭಿಪ್ರಾಯ

* ಉಡುಪಿಯ ಅಜ್ಜರಕಾಡು ಕಾಲೇಜ್​ನಲ್ಲಿ ಉಪನ್ಯಾಸ

ಉಡುಪಿ: ಭಾರತವು ಹೈಡ್ರೋಜನ್​ ಚಾಲಿತ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಈಗಾಗಲೇ ಪ್ರಯೋಗ ನಡೆಸುತ್ತಿದೆ. ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್​ ಭಾರತಕ್ಕೆ ಅಪಾರವಾಗಿ ಆಸರೆಯಾಗಲಿದೆ. ನಮೋ ಗ್ರೀನ್​ ರೈಲ್​ ದೇಶದ ಮೊದಲ ಹೈಡ್ರೋಜನ್​ ಇಂಧನ ಕೋಶ ಆಧಾರಿತ, ಶೂನ್ಯ ಇಂಗಾಲ ಯೋಜನೆಯಾಗಿದೆ. ತೈಲದ ಮೇಲಿನ ದೇಶ-ವಿದೇಶದ ಅವಲಂಬನೆಯೂ ಕಡಿಮೆಯಾಗಿ ಇಂಗಾಲದ ಹೊರಸೂಸುವಿಕೆ ತಗ್ಗಲೂ ಸಹಕಾರಿಯಾಗಲಿದೆ ಎಂದು ಕೈಗಾರಿಕಾ ರಸಾಯನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಬಿ. ಎಸ್​. ಶೇರಿಗಾರ ಅಭಿಪ್ರಾಯಪಟ್ಟರು.

ಉಡುಪಿ ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿಜಿಎವಿ ಸಭಾಂಗಣದಲ್ಲಿ ಕಾಲೇಜ್​ನ ರಸಾಯನಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಶನಿವಾರ (ಅ.3) ಆಯೋಜಿಸಿದ್ದ 'ಇನ್ ಫ್ಲಾಮೇಬಲ್​ ಏರ್​ ಟು ಗ್ರೀನ್​ ಹೈಡ್ರೋಜನ್​: ದಿ ಜರ್ನಿ ಟು ಆ್ಯನ್​ ಅಲ್ಟ್ರನೇಟ್​ ಫ್ಯೂಯಲ್​' ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಐಕ್ಯೂಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ, ಬಾಲಕೃಷ್ಣ ಬಾಯರಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪುನೀತ್​ ತೆಂಡುಲ್ಕರ್​ ಸ್ವಾಗತಿಸಿದರು. ಉಪನ್ಯಾಸಕಿ ಅಮೃತಾ ವಂದಿಸಿದರು. ವಿದ್ಯಾರ್ಥಿನಿ ಶ್ರಾವಣಿ ಕಾರ್ಯಕ್ರಮ ನಿರೂಪಿಸಿದರು.

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್​ ಕುರಿತ ಸಂಶೋಧನೆಗಳು ಅಭಿವೃದ್ಧಿಯ ಸಂಕೇತವಾಗಿದೆ. ಮುಂದಿನ ದಿನಗಳಲ್ಲಿ ಯುವ ಸಂಶೋಧಕರಿಗೆ ಹಲವು ಅವಕಾಶ ಸೃಷ್ಟಿಸಲಿವೆ. ನಮ್ಮ ವಿದ್ಯಾರ್ಥಿನಿಯರೂ ಈ ಉದಯೋನ್ಮುಖ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಸಂಶೋಧಕರಾಗಿ ವಿಜ್ಞಾನಿಗಳಾಗಬೇಕು.
ಪ್ರೊ. ಡಾ.ನಿಕೇತನಾ. ಅಜ್ಜರಕಾಡು ಕಾಲೇಜ್​ನ ಪ್ರಾಂಶುಪಾಲೆ.