ರಾಜೇಶ್ ನಾಯ್ಕ ವೈಯಕ್ತಿಕ ಖರ್ಚಿನಿಂದ ರಸ್ತೆ ಬದಿಯ ಹುಲ್ಲು, ಪೊದೆಗಳನ್ನು ತೆರವುಗೊಳಿಸಿದರು.
ಪುರಸಭಾ ವ್ಯಾಪ್ತಿಯ ನಾನಾ ಕಡೆ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಹುಲ್ಲು, ಪೊದೆಗಳಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಇದನ್ನು ನಿವಾರಿಸಲು ಪುರಸಭೆಯಲ್ಲಿ ಹಣವಿಲ್ಲ ಎಂಬ ದೂರು ಬಂದ ಹಿನ್ನೆಲೆ ಶಾಸಕ ರಾಜೇಶ್ ನಾಕ್ ವೈಯಕ್ತಿಕ ಖರ್ಚಿನಿಂದ ತೆರವು ಕಾರ್ಯಾಚರಣೆಗೆ ನೆರವಾಗಿದ್ದಾರೆ.
ರಸ್ತೆ ಬದಿ ಹುಲ್ಲು ಹಾಗೂ ಪೊದೆಗಳಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿತ್ತು. ಹಲವು ಕಡೆ ವಾಹನಗಳ ಸಂಚಾರಕ್ಕೂ ಅಡಚಣೆಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಪುರಸಭಾ ಮಾಜಿ ಸದಸ್ಯರು ಹಾಗೂ ಸಾರ್ವಜನಿಕರಾದ ವಿದ್ಯಾವತಿ ಪ್ರಮೋದ್ ಕುಮಾರ್, ಚೈತನ್ಯ ಗಣೇಶ್, ದಾಸ್, ಜಯಂತಿ, ದೇವಕಿ, ಶಶಿಕಲಾ ಶಾಸಕರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು.
ರಾಜೇಶ್ ನಾಕ್ ವೈಯಕ್ತಿಕ ಖರ್ಚಿನಲ್ಲಿ ಹಾಗೂ ಪುರಸಭೆ ಮಾಜಿ ಸದಸ್ಯರ ಸಹಕಾರದೊಂದಿಗೆ ಐದು ಮಂದಿ ಕಾರ್ಮಿಕರನ್ನು ನಿಯೋಜಿಸಿ ರಸ್ತೆ ಬದಿ ಬೆಳೆದಿರುವ ಪೊದೆ ತೆರವು ಕಾರ್ಯ ಆರಂಭಿಸಿದ್ದಾರೆ.