ಬೆಳ್ಳಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಉದ್ಘಾಟನಾ ಸವಾರಂಭದಲ್ಲಿ ಉದ್ಯಮಿ ಜಯಪ್ರಕಾಶ ಶೆಟ್ಟಿ ಹೆಟ್ನಬೈಲು ದಂಪತಿಯನ್ನು ಅಭಿನಂದಿಸಲಾಯಿತು. ಪ್ರಮುಖರಾದ ಎನ್.ಮಂಜಯ್ಯ ಶೆಟ್ಟಿ, ಪ್ರೊ.ರುರಾಮ ಶೆಟ್ಟಿ, ಕರುಣಾಕರ ಶೆಟ್ಟಿ ಹರ್ಜಿ, ನಾಗೇಶ ನಾಯ್ಕ, ಸುದರ್ಶನ ಶೆಟ್ಟಿ ಮತ್ತಿತರರು ಇದ್ದರು.
ಕುಂದಾಪುರ: ಸರ್ಕಾರಿ ಶಾಲೆ ಉಳಿಸಿ ಬೆಳೆಸುವುದು ಊರಿನವರ ಜವಾಬ್ದಾರಿಯಾಗಬೇಕು. ದಾನಿಗಳು, ಹಳೇ ವಿದ್ಯಾರ್ಥಿಗಳ ಸಹಭಾಗಿತ್ವ, ಊರವರ ಬೆಂಬಲವಿದ್ದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಬೈಂದೂರು ಶೈಕ್ಷಣಿಕ ವಲಯದ ಬೆಳ್ಳಾಲ(ನಂದ್ರೊಳ್ಳಿ)ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಸಹಕಾರದೊಂದಿಗೆ ಪುನಃ ನಿರ್ವಾಣಗೊಂಡ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಜಯಪ್ರಕಾಶ ಶೆಟ್ಟಿ ಹೆಟ್ನಬೈಲು ಮಾತನಾಡಿದರು. ವಂಡ್ಸೆ ವ್ಯವಸಾಯಿಕ ಸೇವಾ ಸಹಕಾರಿ ಸಂ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಜಯಪ್ರಕಾಶ ಶೆಟ್ಟಿ ಹೆಟ್ನಬೈಲು, ಪತ್ನಿ ಶ್ರುತಿ ಜಯಪ್ರಕಾಶ್ ಶೆಟ್ಟಿ, ತಾಯಿ ಸಿಂಗಾರಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಶಾಲೆಗೆ ಐದು ಬೆಂಚ್, ಡೆಸ್ಕ್ ಕೊಡುಗೆಯಾಗಿ ನೀಡಿದ ಗಣೇಶ ಶೆಟ್ಟಿ, ಸಮವಸ್ತ್ರ ಕೊಡುಗೆ ನೀಡಿದ ಪ್ರಶಾಂತ ನಾಯ್ಕ ಸಾವಾಜಿಕೊಡ್ಲು ಅವರನ್ನು ಗೌರವಿಸಲಾಯಿತು. ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರಾಪಂ ವಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ಸಬ್ಲಾಡಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಕ್ಷೇತ್ರಪಾಲ ಅವರನ್ನು ಗೌರವಿಸಲಾಯಿತು.
ಶತವಾನೋತ್ಸವ ಸಮಿತಿ ಅಧ್ಯಕ್ಷ ಪ್ರೊ.ರುರಾಮ ಶೆಟ್ಟಿ ಊರುಬೈಲು, ಗುತ್ತಿಗೆದಾರ ಕರುಣಾಕರ ಶೆಟ್ಟಿ ಹರ್ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಕೆರಾಡಿ ಗ್ರಾಪಂ ವಾಜಿ ಅಧ್ಯಕ್ಷ ಸುದರ್ಶನ ಶೆಟ್ಟಿ ಕೆರಾಡಿ, ನಾರಾಯಣ ಶೆಟ್ಟಿ ಸಬ್ಲಾಡಿ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ರಮೇಶ ಶೆಟ್ಟಿ, ಮುಖ್ಯಶಿಕ್ಷಕ ಕರುಣಾಕರ ಶೆಟ್ಟಿ, ವಿದ್ಯಾರ್ಥಿ ನಾಯಕ ಸ್ವಜಿತ್ ಉಪಸ್ಥಿತರಿದ್ದರು. ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಕೃಷ್ಣಯ್ಯ ಆಚಾರ್ಯ ಕ್ಷೇತ್ರಪಾಲ ಪ್ರಾಸ್ತಾವಿಕ ವಾತನಾಡಿದರು. ಅಂಬಿಕಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಸ್ವಾತಿ ಭಟ್ ವಂದಿಸಿದರು. ಆತ್ಮರಾಜ ಶೆಟ್ಟಿ ನಿರೂಪಿಸಿದರು.