ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆಂಗ್ಲ ಮಾಧ್ಯಮ ತರಗತಿಗಳನ್ನು ಡಾ.ಭಾರ್ಗವಿ ಆರ್.ಐತಾಳ್ ಹೆಬ್ರಿ ಉದ್ಘಾಟಿಸಿದರು. ಪ್ರಮುಖರಾದ ಆನಂದ ಪೂಜಾರಿ ಅಲ್ಬಾಡಿ, ಸತೀಶ್ ಕುಲಾಲ್, ಸುನೀತಾ ಹೆಬ್ಬಾರ್ ಮೊದಲಾದವರಿದ್ದರು. 
ಉಡುಪಿ

ಸರ್ಕಾರಿ ಶಾಲಾ ದಾಖಲಾತಿಗೆ ಕೀಳರಿಮೆ ಸಲ್ಲ

ಇಂದಿರಾ ಎನ್ ಕೆ
ಬೆಳ್ವೆ: ದಾನಿಗಳ ಕೊಡುಗೆಗಳಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶಗಳಿವೆ. ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರು ಯಾವುದೇ ಕೀಳರಿಮೆಯಿಲ್ಲದೆ ಮಕ್ಕಳನ್ನು ದಾಖಲಿಸಬೇಕು ಎಂದು ಹೆಬ್ರಿ ಶ್ರೀ ರಾವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್ ಹೆಬ್ರಿ ಹೇಳಿದರು.
ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆಂಗ್ಲ ಮಾಧ್ಯಮ ತರಗತಿಗಳನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಆನಂದ ಪೂಜಾರಿ ಅಲ್ಬಾಡಿ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಜೆಸಿಐ ಅಧ್ಯಕ್ಷ ಸತೀಶ್ ಕುಲಾಲ್, ಕಾರ್ಯದರ್ಶಿ ಸುನೀತಾ ಹೆಬ್ಬಾರ್, ನಿಕಟ ಪೂರ್ವಾಧ್ಯಕ್ಷೆ ಸೂನಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಚಂದ್ರಿಕಾ, ಪತ್ರಕರ್ತ ಕೆ.ಸಂಜೀವ ಆರ್ಡಿ, ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಪ್ರಸಾದ ಪೂಜಾರಿ ಅಲ್ಬಾಡಿ, ಪದಾಧಿಕಾರಿಗಳಾದ ಸುದೀಪ್ ಶೆಟ್ಟಿ ಅಲ್ಬಾಡಿ, ದಿನಕರ ಶೆಟ್ಟಿ ಅಲ್ಬಾಡಿ, ಅನ್ವರ್ ಅಲ್ಬಾಡಿ, ಚಂದ್ರ ನಾಯ್ಕ ಅಲ್ಬಾಡಿ, ಗಣಪತಿ ಶೆಟ್ಟಿ ಅಲ್ಬಾಡಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪಾರ್ವತಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ ಮೊದಲಾದವರಿದ್ದರು.
ಮುಖ್ಯಶಿಕ್ಷಕಿ ಉಷಾ ಹೆಬ್ಬಾರ್ ಸ್ವಾಗತಿಸಿದರು. ಸಹ ಶಿಕ್ಷಕಿ ಸುಕನ್ಯಾ ನಿರೂಪಿಸಿದರು. ಅತಿಥಿ ಶಿಕ್ಷಕಿ ಸುಮನಾ, ಶ್ರೀಮತಿ ಸಹಕರಿಸಿದರು. ಅತಿಥಿ ಶಿಕ್ಷಕಿ ಮನುಶ್ರೀ ವಂದಿಸಿದರು.

ನೋಟ್ ಪುಸ್ತಕ ಕೊಡುಗೆ

ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ ಅವರಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳ ಕೊಡುಗೆ ವಿತರಣೆ, ಹೆಬ್ರಿ ಶ್ರೀ ರಾವೇಂದ್ರ ಚಾರಿಟೆಬಲ್ ಟ್ರಸ್ಟ್ ಹಾಗೂ ಜೆಸಿಐ ಹೆಬ್ರಿ ವತಿಯಿಂದ ನೋಟ್ ಪುಸ್ತಕಗಳ ವಿತರಣೆ, ಶಾಲೆಗೆ ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕಿ ಉಷಾ ಶ್ರೀಧರ ಹೆಬ್ಬಾರ್ ಅಲ್ಬಾಡಿ ಅವರಿಂದ 1,000 ರೂ. ಬ್ಯಾಂಕ್ ಠೇವಣಿ ಪತ್ರ ಹಸ್ತಾಂತರ, ದಿನಕರ ಶೆಟ್ಟಿ ಅಲ್ಬಾಡಿ ಗುಡ್ಡಿಮನೆ ಅವರಿಂದ ಗುರುತಿನ ಚೀಟಿ ವಿತರಣೆ ನಡೆಯಿತು. ಬಳಿಕ ಎಸ್‌ಡಿಎಂಸಿ, ಪಾಲಕರ ಸಭೆ ನಡೆಯಿತು.