ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಉಕ್ಕಿನಡ್ಕದಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಕಾಮಗಾರಿ ಪರಿಶೀಲಿಸಿದರು.
ಕಾಸರಗೋಡು: ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಅದರ ಸಂಬಂಧಿತ ಕಚೇರಿಗಳ ನಿರ್ಮಾಣ ಕಾರ್ಯವನ್ನು ಮೂಲಸೌಕರ್ಯಗಳೊಂದಿಗೆ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದರು.
ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಎಂಬಿಬಿಎಸ್ ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ವಿ.ಚಂದ್ರನ್, ಕಿಟ್ಕೊ ಯೋಜನಾ ವ್ಯವಸ್ಥಾಪಕ, ಲೋಕೋಪಯೋಗಿ ನಿರ್ಮಾಣ ವಿಭಾಗ, ಬಂದರು ಇಂಜಿನಿಯರಿಂಗ್, ಜಲ ಪ್ರಾಧಿಕಾರ ಮತ್ತು ಕೆಎಸ್‌ಇಬಿ ಕಾರ್ಯನಿರ್ವಾಹಕ ಇಂಜಿನಿಯರ್‌ಗಳೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನೆ ನಡೆಸಿದರು.
ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಡಾ.ಟಿ.ಜಿ.ಸಿಂಧು, ಸೂಪರಿಂಡೆಂಟ್ ಡಾ. ಆರ್.ಪ್ರವೀಣ್, ನರ್ಸಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ತಸೀಮ್ ಸಬಿತ್, ಉಪ ನರ್ಸಿಂಗ್ ಸೂಪರಿಂಡೆಂಟ್ ಕೆ.ಎಸ್.ಜಯಕುಮಾರಿ, ಕಾರ್ಯದರ್ಶಿ ಕೆ.ಕೌಶಿಕ್, ಪಿಟಿಎ ಕಾರ್ಯದರ್ಶಿ ಡಾ.ಶಾಲಿನಿ ಕೃಷ್ಣನ್, ಸರ್ಜನ್ ಅನ್ಶಾದ್ ಅವರನ್ನೊಳಗೊಂಡ ತಂಡದೊಂದಿಗೆ ಕಾಲೇಜಿನ ಸ್ಥಿತಿಗತಿಯ ಕುರಿತು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಚರ್ಚಿಸಿದರು.