liquor 
ಉಡುಪಿ

ಸಾರಾಯಿ ಅಂಗಡಿಗೆ ಸರ್ಕಾರಿ ಜಾಗ!

ಉಡುಪಿ ಜಿಲ್ಲಾಧಿಕಾರಿ ಹಿಂಬರಹ ಪರಿಶಿಷ್ಟರಿಗಿಲ್ಲ ನಿವೇಶನ ಭಾಗ್ಯ

ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಸ.ನಂ. 6/1ಸಿಯಲ್ಲಿ ಹಲವು ದಶಕಗಳಿಂದ ಪರಿಶಿಷ್ಟ ಜಾತಿ ಕುಟುಂಬಗಳು ವಾಸವಿದ್ದು, ಅವರಿಗೆ ಸರ್ಕಾರಿ ಜಮೀನು ಬಂಡೆ ಎಂಬ ಕಾರಣಕ್ಕೆ ಹಕ್ಕುಪತ್ರ ನೀಡಿಲ್ಲ. ಆದರೆ ಈ ಜಮೀನನ್ನು ಸಾರಾಯಿ ಅಂಗಡಿಗೆ ಹಿಂದೆ ಮೀಸಲಿರಿಸಲಾಗಿತ್ತು ಎಂದು ಉಡುಪಿ ಜಿಲ್ಲಾಧಿಕಾರಿ 2025ರ ಮಾರ್ಚ್ 31ರಂದು ಹಿಂಬರಹ ನೀಡಿದ್ದಾರೆ. ಇದೇ ಹಿಂಬರಹವನ್ನು ಆಧಾರವಾಗಿಟ್ಟು ಕಾಪು ತಹಸೀಲ್ದಾರ್ 2026ರ ಅಕ್ಟೋಬರ್ 3ರಂದು ಹಿಂಬರಹ ನೀಡಿದ್ದಾರೆ.

ರಸ್ತೆ, ಬಂಡೆ, ಕೆರೆ!

ಕಾಪು ತಾಲೂಕು ವ್ಯಾಪ್ತಿಯ ಒಟ್ಟು 30 ಗ್ರಾಮಗಳಲ್ಲಿ ಲಭ್ಯವಿರುವ ಡಿಸಿ ಮನ್ನಾ ಜಮೀನಿನ ಬಗ್ಗೆ ಪ್ರಸ್ತುತ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಕುರ್ಕಾಲು ಗ್ರಾಮದಲ್ಲಿ ಸ.ನಂ. 203/1ರಲ್ಲಿ 2.06 ಎಕರೆ ಮತ್ತು 203/8ರಲ್ಲಿ 1.26.50 ಎಕರೆ, 208/2ರಲ್ಲಿ 0.95 ಎಕರೆ ಡಿಸಿ ಮನ್ನಾ ಜಮೀನು ಉಳಿಕೆಯಾಗಿದ್ದು, ಈ ಜಮೀನು ಬಂಡೆ ಜಮೀನಾಗಿದೆ. ಎಲ್ಲೂರು ಗ್ರಾಮದಲ್ಲಿ 1.78 ಎಕರೆ ಡಿಸಿ ಮನ್ನಾ ಭೂಮಿ ಪೈಕಿ 1.30 ಎಕರೆ ಡಿಸಿ ಮನ್ನಾ ಜಮೀನು ಯುಪಿಸಿಎಲ್‌ಗೆ ಭೂ ಸ್ವಾಧೀನಗೊಂಡಿದೆ. ಪಿಲಾರು ಗ್ರಾಮದಲ್ಲಿ 13.79 ಎಕರೆ ಡಿ.ಸಿ. ಮನ್ನಾ ಜಮೀನು ಇದ್ದು, 7.04 ಎಕರೆ ಡಿ.ಸಿ ಮನ್ನಾ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ.

ಅನ್ಯರಿಗೆ ಅವಕಾಶವಿಲ್ಲ

ಡಿಸಿ ‘ಡಿಪ್ರೆಸ್ಡ್ ಕ್ಲಾಸಸ್’ ಮನ್ನಾ ಜಮೀನನ್ನು ಎಸ್‌ಸಿ/ಎಸ್‌ಟಿಗಳಿಗೆ ವಾತ್ರವೇ ಮಂಜೂರು ವಾಡಬಹುದು ಎಂಬುದನ್ನು ಹಿಂದಿನ ಕಂದಾಯ ಸಚಿವ ಕೃಷ್ಣಭೈರೇ ಗೌಡ ಸದನದಲ್ಲೇ ತಿಳಿಸಿದ್ದು, ಈ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲು ಅವಕಾಶವಿಲ್ಲ. ಈ ಜಮೀನನ್ನು ಹಿಂಪಡೆಯುವ ಅಥವಾ ತತ್ಸವಾನ ಜಮೀನನ್ನು ಮೀಸಲಿಡುವ ಮೂಲಕ ಎಸ್‌ಸಿ, ಎಸ್‌ಟಿಗಳ ಹಿತಾಸಕ್ತಿಯನ್ನು ಕಾಪಾಡುವ ಯಾವ ಪ್ರಯತ್ನವನ್ನೂ ಕಾಪು ತಾಲೂಕು ಆಡಳಿತ ಮಾಡಿಲ್ಲ.

ಸಾರ್ವಜನಿಕ ಉದ್ದೇಶಕ್ಕೆ ಬಳಕೆ

ತೆಂಕ ಗ್ರಾಮದಲ್ಲಿ 54.85 ಎಕರೆ ಡಿಸಿ ಮನ್ನಾ ಜಮೀನು ಇದ್ದು, ಈ ಪೈಕಿ 3.41 ಎಕರೆ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ. 7.58 ಎಕರೆ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲಾಗಿದೆ. 4.74 ಎಕರೆ ಡಿಸಿ ಮನ್ನಾ ಜಮೀನನ್ನು ಈ ವರೆಗೂ ಹಂಚಿಕೆ ವಾಡದೆ ಹಾಗೆಯೇ ಬಿಟ್ಟಿರುವುದು ಈ ಜಮೀನನ್ನೂ ಎಸ್‌ಸಿ, ಎಸ್‌ಟಿಗಳ ಕೈತಪ್ಪುವಂತೆ ವಾಡುವ ನಡೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಕೊಂಕಣ ರೈಲ್ವೆಗೆ 0.30 ಎಕರೆಗೂ ಹೆಚ್ಚು ಜಮೀನು ಸ್ವಾಧೀನಗೊಂಡಿದೆ. ಮಟ್ಟು ಗ್ರಾಮದಲ್ಲಿ 0.22 ಎಕರೆ ಜಮೀನು ಹೊಳೆ ಪ್ರದೇಶ ‘ಸಿಆರ್‌ಜಡ್’ ಆಗಿದೆ. ಪಾಂಗಾಳ ಗ್ರಾಮದಲ್ಲಿ 5.02 ಎಕರೆ ಡಿಸಿ ಮನ್ನಾ ಜಮೀನು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ.

ಸರ್ಕಾರಿ ಜಾಗವನ್ನು ಸಾರಾಯಿ ಅಂಗಡಿಗೆ ನೀಡಬಹುದಾದರೆ ದಲಿತರ ಮನೆ ನಿವೇಶನಕ್ಕೆ ನೀಡಲು ಸಾಧ್ಯವಿಲ್ಲವೇ? ಕಾಪು ತಹಸೀಲ್ದಾರ್ ಸ್ಥಳ ಪರಿಶೀಲಿಸಿ ಜಿಲ್ಲಾಧಿಕಾರಿಗೆ ಯಥಾಸ್ಥಿತಿ ವರದಿ ನೀಡಬೇಕು. ದಲಿತರು ಮನೆ ಕಟ್ಟಿಕೊಂಡಿರುವಷ್ಟು ಸ್ಥಳವನ್ನು ತಾಲೂಕು ಮೋಜಣಿದಾರರ ಮೂಲಕ ಅಳತೆ ವಾಡಿಸಬೇಕು. ವಿಶೇಷ ಪ್ರಕರಣವೆಂದು ಗುರುತಿಸಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಮರುಪ್ರಸ್ತಾವನೆ ಸಲ್ಲಿಸಬೇಕು. ಮೇಲ್ಮನವಿ ಸಲ್ಲಿಸಿ ಎಂದು ತಹಸೀಲ್ದಾರ್ ನೀಡಿದ ಹಿಂಬರಹ ಒಪ್ಪಲು ಸಾಧ್ಯವಿಲ್ಲ. ಸಾವಾಜಿಕ ನ್ಯಾಯದ ವಿರುದ್ಧ ನಡೆದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಈ ಬಗ್ಗೆ ಪ.ಜಾ. ಆಯೋಗಕ್ಕೆ ಲಿಖಿತ ದೂರು ಸಲ್ಲಿಸಲಾಗಿದೆ.
ಕೃಷ್ಣ ಮೂಡುಬೆಳ್ಳೆ ದಸಂಸ ಅಂಬೇಡ್ಕರ್ ವಾದ ಕಾಪು ತಾಲೂಕು ಸಂಟನಾ ಸಂಚಾಲಕ
ಕುಮ್ಕಿ, ಅಕ್ರಮ-ಸಕ್ರಮ, ಒತ್ತುವರಿ ಹೆಸರಿನಲ್ಲಿ ಬಲಾಢ್ಯರೇ ಸರ್ಕಾರಿ ಜಮೀನುಗಳನ್ನು ಸ್ವಾಧೀನದಲ್ಲಿಟ್ಟಿಕೊಂಡಿದ್ದು, ಕೃಷಿ ವಾಡುವ ನೆಪದಲ್ಲಿ ಅಪಾರ ಪ್ರವಾಣದ ಸರ್ಕಾರಿ ಜಮೀನನ್ನು ಮಂಜೂರು ವಾಡುವ ಷಡ್ಯಂತ್ರವನ್ನು ವಾಡುತ್ತಿದ್ದಾರೆ. ಮೊದಲು ಸರ್ಕಾರಿ ಜಮೀನಿನಲ್ಲಿ ಪ್ರತಿಗ್ರಾಮದಲ್ಲಿ ಶೇ.50 ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿರಿಸಿ ಇತರ ಮಂಜೂರಾತಿ ಪ್ರಕ್ರಿಯೆ ನಡೆಸಬೇಕು. ಈ ಬಗ್ಗೆ ಒಂದು ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ತಾಲೂಕು, ಜಿಲ್ಲಾಡಳಿತ ಕಿವಿಗೊಡುತ್ತಿಲ್ಲ.
ಸಂಜೀವ ಬಳ್ಕೂರು ಉಡುಪಿ ಜಿಲ್ಲಾ ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ
ಪರಂಬೋಕು ಜಮೀನನ್ನು ವಿರಹಿತಪಡಿಸಲು ಕಾಯ್ದೆಯಂತೆ ಅವಕಾಶವಿಲ್ಲ. 94ಸಿ ಅರ್ಜಿಗಳನ್ನು ತಿರಸ್ಕರಿಸಿ ಹಿಂಬರಹ ನೀಡಿದ್ದು, ಅರ್ಜಿದಾರರು ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.
ಅನಂತಶಂಕರ, ಕಾಪು ತಹಸೀಲ್ದಾರ್