ಹೆಬ್ರಿ: ರಾಷ್ಟ್ರೀಯ ಹೆದ್ದಾರಿ 169ಎ ಶಿವಪುರದಲ್ಲಿ ಶನಿವಾರ ಮುಂಜಾನೆ 2 ಗಂಟೆಗೆ ಬಾಳೆಕಾಯಿ ಹೊತ್ತು ಸಾಗುತ್ತಿದ್ದ ಗೂಡ್ಸ್ ವಾಹನದ ಬ್ರೇಕ್ ಫೈಲ್ ಆಗಿ ಪಲ್ಟಿಯಾಗಿದೆ.
ಗೂಡ್ಸ್ ಗಾಡಿ ಶಿಕಾರಿಪುರದಿಂದ ಉಡುಪಿ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯನ್ನು ಬದಲಿಸಿ ನೀಡಲಾಗಿದೆ, ನೇರವಾಗಿ ಬರುವಾಗ ರಸ್ತೆಯಲ್ಲಿ ಅಳವಡಿಸಿರುವ ಬ್ಯಾರಿಕೆಡ್‌ಗಳನ್ನು ಗಮನಿಸದೆ ಹೆಚ್ಚು ಅಪಘಾತಗಳು ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಚಾಲಕ ಹಮ್ಜಾದ್ ಅಪಾಯದಿಂದ ಪಾರಾಗಿದ್ದಾರೆ.