ವತ್ತಿನೆಣೆ ಶ್ರೀ ಗುರುರಾವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಸ್ವಾಗತ ಮಹಾದ್ವಾರದ ಕಾಮಗಾರಿಗೆ ಗುರುವಾರ ಯು.ಬಿ.ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಪ್ರಮುಖರಾದ ಸೂಲಿಯಣ್ಣ ಶೆಟ್ಟಿ, ಎಸ್.ರಾಜು ಪೂಜಾರಿ, ಮಂಜುನಾಥ ಶೆಟ್ಟಿ, ಎಸ್.ನಾಗಯ್ಯ ಶೆಟ್ಟಿ ಹೊಸ್ಮನೆ ಮತ್ತಿತರರಿದ್ದರು. 
ಉಡುಪಿ

ದೇವರ ನಾಮ ಸ್ಮರಣೆಯಿಂದ ಒಳಿತು

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಬೈಂದೂರು
ಸನಾತನ ಧರ್ಮದ ಉಳಿವಿಗೆ ದೇವಾಲಯಗಳ ಪಾತ್ರ ಹಿರಿದು. ದೇವಾಲಯಗಳು ಸಗುಣೋಪಾಸನೆ ವಾಡುವ ಪವಿತ್ರ ಸ್ಥಳ. ವಿಭಿನ್ನ ಹೆಸರುಗಳಿಂದ ಗುರುತಿಸುವ ದೇವರು ಎಲ್ಲವನ್ನು ಮೀರಿದ ಶಕ್ತಿ. ದೇವರ ನಾಮಸ್ಮರಣೆಯಿಂದ ಒಳಿತಾಗುತ್ತದೆ ಎಂದು ಯುಬಿಎಸ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಯು.ಬಿ.ಶೆಟ್ಟಿ ಹೇಳಿದರು.
ವತ್ತಿನೆಣೆ ಶ್ರೀ ಗುರುರಾವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಗುರುವಾರ ಯುಬಿಎಸ್ ಟ್ರಸ್ಟ್ ವತಿಯಿಂದ ಸೇವಾರ್ಥ ನಿರ್ಮಿಸಿಕೊಡುವ ಸ್ವಾಗತ ಮಹಾದ್ವಾರದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ವಾತನಾಡಿದರು.
ಶ್ರೀ ಗುರುರಾವೇಂದ್ರ ಸ್ವಾಮಿ ಮಠ ಅಜೀರ್ಣಾವಸ್ಥೆಯಿಂದ ಪ್ರಸ್ತುತ ಮರಳಿ ಗತ ವೈಭವಕ್ಕೆ ಮರಳಿದೆ. ಎಲ್ಲರ ದುಖಃಗಳನ್ನು ದೂರ ವಾಡುವ ಗುರುರಾಯರು, ಭಕ್ತರ ಪ್ರಾರ್ಥನೆಯಂತೆ ಹಾಗೂ ಸಮಿತಿಯ ಆಶಯದಂತೆ ಎಲ್ಲ ಅಡಚಣೆ ದೂರವಾಗಿ ದೇವಳದ ಎದುರು ಸುಂದರ ರಾಜಗೋಪುರ ನಿರ್ವಾಣವಾಗಲಿದೆ ಎಂದರು.
ಬೆಳಗ್ಗೆ ರಾಯರ ಸನ್ನಿಧಿಯಲ್ಲಿ ಅರ್ಚಕರಾದ ಸುಬ್ರಾಯ ನಾವಡ ಹಾಗೂ ಮುರುಳಿ ನಾವಡ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನಡೆಯಿತು. ಶ್ರೀ ಗುರುರಾವೇಂದ್ರ ಸ್ವಾಮಿ ಮಠ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಉಪಾಧ್ಯಕ್ಷ ಎಸ್.ರಾಜು ಪೂಜಾರಿ, ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಎಸ್.ನಾಗಯ್ಯ ಶೆಟ್ಟಿ ಹೊಸ್ಮನೆ, ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.