ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ನಡೆದ ಸಸ್ಯ ಶ್ಯಾಮಲಾ-2026 ಕಾರ್ಯಕ್ರಮದಲ್ಲಿ ರಶ್ಮಿತಾ ಯುವರಾಜ್ ಜೈನ್, ರಮೇಶಚಂದ್ರ ಪಿ., ಸುಂದರ ಶೆಟ್ಟಿ ಮತ್ತಿತರರಿದ್ದರು. 
ಉಡುಪಿ

ಸಸ್ಯ ಶ್ಯಾಮಲಾ ಯೋಜನೆಗೆ ಉತ್ತಮ ಸ್ಪಂದನೆ

ಮೂಡುಬಿದಿರೆ: ಪ್ರಕೃತಿ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಲ್ಲಬೆಟ್ಟು, ಮೂಡುಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ ಪರಿಸರ ಪ್ರೇಮಿ ರಸಿಕಾ ಜೈನ್ ಸ್ಮರಣಾರ್ಥ ಹಮ್ಮಿಕೊಂಡಿರುವ ಸಸ್ಯ ಶ್ಯಾಮಲಾ-2026 ಸಾವಿರ ಗಿಡಗಳನ್ನು ನೆಡುವ, ಹಂಚುವ ಅಭಿಯಾನದ ನಾಲ್ಕನೇ ಕಾರ್ಯಕ್ರಮ ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ನಡೆಯಿತು.
ಎಕ್ಸಲೆಂಟ್ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಮಹತ್ವಾಕಾಂಕ್ಷಿ ಸಸ್ಯ ಶ್ಯಾಮಲಾ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಈ ಅಭಿಯಾನವನ್ನು ಜನಾಂದೋಲನವಾಗಿ ರೂಪಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮಹಾಮಾಯಿ ದೇವಸ್ಥಾನ ಅಧ್ಯಕ್ಷ ಸುಂದರ ಶೆಟ್ಟಿ, ಕಾರ್ಯದರ್ಶಿ ಕಮಲಾಕ್ಷ ರಾವ್, ಕೋಶಾಧಿಕಾರಿ ರಮೇಶಚಂದ್ರ ಪಿ., ಟ್ರಸ್ಟಿಗಳಾದ ರಾಮಚಂದ್ರ, ಪದ್ಮಯ್ಯ ಬಿ.ಸುವರ್ಣ, ದಿನೇಶ್ ರಾವ್, ಗೋಪಾಲ ಕೋಟ್ಯಾನ್, ಸೂರ್ಯ ಭಟ್, ಶಿವಾನಂದ ಪೈ, ದೇವಸ್ಥಾನದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಉಪನ್ಯಾಸಕ ವಾದಿರಾಜ ಕಲ್ಲೂರಾಯ, ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವರೂಪ್ ಜೈನ್, ಶಿಕ್ಷಕಿ ರಂಜಿತಾ, ಸಂಸ್ಥೆ ಸಿಬ್ಬಂದಿ ಭಾಗವಹಿಸಿದರು.