ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಅಧ್ಯಾಪಕರನ್ನು ಗೌರವಿಸಲಾಯಿತು.
ಹೆಬ್ರಿ: ಅಂದು ಸವಲತ್ತುಗಳು ಕಡಿಮೆ ಇದ್ದು, ಕಲಿಕೆಗೆ ಅಡಚಣೆ ಇದ್ದರೂ ವಿದ್ಯಾರ್ಥಿಗಳು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದರು ಎಂದು ನಿವೃತ್ತ ಪ್ರಾಂಶುಪಾಲ ಡಾ.ಪಾದೆಕಲ್ಲು ವಿಷ್ಣು ಭಟ್ ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
1988-1991ರ ಅವಧಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ.ಎಸ್ ಅಧ್ಯಕ್ಷತೆ ವಹಿಸಿದ್ದರು.
ಗುರುಗಳಾದ ಡಾ.ಪ್ರಭು ಶೆಟ್ಟಿ, ಡಾ.ಎಂ.ಎನ್.ಹೆಗ್ಡೆ, ರಾಜಶೇಖರ ಹೆಬ್ಬಾರ್, ಡಾ.ಸುಕನ್ಯಾ ಮೇರಿ ನಾರ್ಂಡಿಸ್, ಡಾ.ಅನಂತ ಪದ್ಮನಾಭ ಆಚಾರ್, ನರೇಂದ್ರ.ಎಸ್ ಅವರನ್ನು ಗೌರವಿಸಲಾಯಿತು. ಹೇಮಲತಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಸ್ವಾಗತಿಸಿದರು. ಮುದ್ದು ಪೂಜಾರಿ ವಂದಿಸಿದರು. ಪ್ರಕಾಶ್ ನಾಯಕ್ ಸಂಯೋಜಿಸಿದರು.