ಮೂಲ್ಕಿ ರೋಟರಿ ಕ್ಲಬ್ ಪದಗ್ರಹಣ ಕಾರ್ಯಕ್ರಮದಲ್ಲಿ ಶೈಕ್ಷಣಿಕ, ಸಾಮಾಜಿಕ ಸಾಧಕರನ್ನು ಗೌರವಿಸಲಾಯಿತು. ಪ್ರಮುಖರಾದ ವಿಕ್ರಮ್ ದತ್ತ, ಡಾ.ಹರಿಕೃಷ್ಣ ಪುನರೂರು, ಭಾನುಮತಿ ಶೆಟ್ಟಿ ಕಕ್ವಗುತ್ತು ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಉತ್ತಮ ನಾಯಕತ್ವಕ್ಕೆ ಕಠಿಣ ಶ್ರಮ, ಸೇವಾ ಮನೋಭಾವ ಅಗತ್ಯ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ವಿಕ್ರಮ್ ದತ್ತ ಹೇಳಿದರು.
ಮೂಲ್ಕಿ ರೋಟರಿ ಕ್ಲಬ್ ಪದಗ್ರಹಣ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಮಾತನಾಡಿ, ಸೇವಾ ಸಂಸ್ಥೆ ಯುವ ಜನರ ಅಭಿವೃದ್ಧಿಯ ಜತೆಗೆ ಗ್ರಾಮೀಣ ಬಡ ಜನರ ಆರೋಗ್ಯ, ಶೈಕ್ಷಣಿಕ ಸಹಕಾರ ಯೋಜನೆ ರೂಪಿಸಿಕೊಳ್ಳುವುದು ಅಗತ್ಯ ಎಂದರು.
ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿ ಮಾತನಾಡಿದರು. ಶೈಕ್ಷಣಿಕ, ಸಾಮಾಜಿಕ ಸಾಧಕರನ್ನು ಗೌರವಿಸಲಾಯಿತು.
ಬಿರುವೆರ್ ಕುಡ್ಲ ಸಂಘಟನೆ ಮೂಲ್ಕಿ ಘಟಕ ಗೌರವಾಧ್ಯಕ್ಷ ಕಿಶೋರ್ ಸಾಲ್ಯಾನ್, ರೋಟರಿ ಕ್ಲಬ್ ಜೋಯಲ್ ಹೆರಾಲ್ಡ್ ಡಿಸೋಜ, ದೇವಿದಾಸ ಶೆಟ್ಟಿ ಕಿನ್ನಿಗೋಳಿ, ಕಳೆದ ಸಾಲಿನ ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜ, ಭುಜಂಗ ಬಿ.ಕವತ್ತಾರು, ನಾರಾಯಣ, ಶಿವರಾಮ ಜಿ.ಅಮೀನ್, ಚಂದ್ರಿಕಾ ಭಂಡಾರಿ, ವೈ.ಎನ್.ಸಾಲ್ಯಾನ್, ರವಿಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜ ಸ್ವಾಗತಿಸಿದರು. ಅಶೋಕ್ ಕುಮಾರ್ ಶೆಟ್ಟಿ ನಿರೂಪಿಸಿದರು.