ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಧರ್ಮ ಜಾಗೃತಿ ಸಭೆ ನಡೆಯಿತು. ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಡಾ.ಹರಿಕೃಷ್ಣ ಪುನರೂರು, ಪ್ರಸಾದ್ ಶೆಟ್ಟಿ, ಆರ್ಯನ್ ಲಚ್ಚಿಲ್ ಸಸಿಹಿತ್ಲು ಮೊದಲಾದವರಿದ್ದರು. 
ಉಡುಪಿ

ಅಂತರಂಗದ ಕಣ್ಣು ತೆರೆದಾಗ ಉತ್ತಮ ಕಾರ್ಯ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಧರ್ಮ ಜಾಗೃತಿ ಸಭೆ ನಡೆಯಿತು. ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಪ್ರಜ್ವಲನೆ ನೆರವೇರಿಸಿದರು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ವಾಮನ ಇಡ್ಯಾ ಅಧ್ಯಕ್ಷತೆ ವಹಿಸಿದ್ದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸಸಿಹಿತ್ಲು ಎಂಬ ದೈಬಿತ್ತಿಲ್ ಇದೀಗ ಬೆಳೆದು ಹೆಮ್ಮರವಾಗಿದೆ. ಮಾದರಿ ಕ್ಷೇತ್ರವಾಗಿ ಬೆಳೆದಿದೆ. ನಮ್ಮ ಅಂತರಂಗದ ಕಣ್ಣು ಅರಳಿದಾಗ ಬ್ರಹ್ಮಕಲಶದಂತಹ ಉತ್ತಮ ಕೆಲಸ ಆಗಲು ಸಾಧ್ಯ. ದೇವರ ಕಲಶಾಭಿಷೇಕದ ಒಟ್ಟಿಗೆ ನಮ್ಮ ಹೃದಯವೂ ಪರಿಶುದ್ಧವಾಗಬೇಕು. ಪರೋಪಕಾರದೊಂದಿಗಿನ ಬದುಕು ನಮ್ಮದಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಪ್ರಸಾದ್ ಶೆಟ್ಟಿ, ಆರ್ಯನ್ ಲಚ್ಚಿಲ್ ಸಸಿಹಿತ್ಲು, ಹಳೆಯಂಗಡಿ ಗ್ರಾಪಂ ಮಾಜಿ ಅಧ್ಯಕ್ಷೆ ಪೂರ್ಣಿಮಾ, ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಬಪ್ಪನಾಡು ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಪಡುಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಸಸಿಹಿತ್ಲು ಕದಿಕೆ ಮೊಗವೀರ ಮಹಾಸಭಾದ ಕಿಶೋರ್ ಗುರಿಕಾರ, ಮೂಲ್ಕಿ ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಅಧ್ಯಕ್ಷ ಜಗನ್ನಾಥ ಕೋಟ್ಯಾನ್, ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಮಂಗಳೂರು ಶ್ರೀ ಭಗವತೀ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಮಾಧವ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಗುರಿಕಾರ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆಮಾರ್ ಸ್ವಾಗತಿಸಿದರು. ಪ್ರವೀಣ್ ಎಸ್.ಕುಂಪಲ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೇಳ ಸುಧಾಕರ ಮತ್ತು ಬಳಗ ಮಂಗಳಾದೇವಿ ಅವರಿಂದ ಸ್ಯಾಕ್ಸೋಫೋನ್ ವಾದನ, ಶ್ರೀ ಶಿರಡಿ ಸಾಯಿಬಾಬ ಮಂದಿರ ಆಶ್ರಿತ ಸಾಯಿ ಶಕ್ತಿ ಕಲಾಬಳಗ ಅರ್ಪಿಸುವ ತುಳು ಪೌರಾಣಿಕ ನಾಟಕ ಬೊಳ್ಳಿ ಮಲೆತ ಶಿವಶಕ್ತಿಲು ಪ್ರದರ್ಶನ ನಡೆಯಿತು.

ವಿಶೇಷ ಗೌರವಾರ್ಪಣೆ

ಉಳ್ಳಾಲ ಶ್ರೀ ಭಗವತೀ ಕ್ಷೇತ್ರದ ಕಾರ್ನವರು ರವಿ ಯಾನೆ ಕಂಡಪ್ಪ, ಬಾಲಕೃಷ್ಣ ಯಾನೆ ಮಂಜಪ್ಪ ಕಾರ್ನವರು, ಮಂಗಲ್ಪಾಡಿ ಅಡ್ಕ ಶ್ರೀ ಭಗವತೀ ಕ್ಷೇತ್ರದ ಕೃಷ್ಣ ಕಾರ್ನವರು, ವಾಡಿಹಿತ್ಲು ಸುಬ್ರಹ್ಮಣ್ಯ ಭಟ್, ಮೀನಾ, ರಾಘು ಪೂಜಾರಿ ಸಸಿಹಿತ್ಲು ಅವರಿಗೆ ವಿಶೇಷ ಗೌರವಾರ್ಪಣೆ ಮಾಡಲಾಯಿತು.