ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂದ ಸುವರ್ಣ ಮಹೋತ್ಸವ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ಡಿ.ಗೋಪಾಲಕೃಷ್ಣ ಕಾಮತ್, ಸಂಜೀವ ಶೆಟ್ಟಿ ಸಂಪಿಗೇಡಿ, ಪ್ರವೀಣ್ ಕುವಾರ ಶೆಟ್ಟಿ ಮೊದಲಾದವರಿದ್ದರು.  
ಉಡುಪಿ

ಆ.1ರಂದು ಸುವರ್ಣ ಮಹೋತ್ಸವ ಆಚರಣೆ

ಸಿದ್ದಾಪುರ: ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂದ ಸುವರ್ಣ ಮಹೋತ್ಸವ ಆಚರಣೆ ಆಗಸ್ಟ್ 1ರಂದು ನಡೆಯಲಿದೆ ಎಂದು ಸಂದ ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್ ತಿಳಿಸಿದರು.
ಸಿದ್ದಾಪುರ ಶ್ರೀರಂಗನಾಥ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಸುವರ್ಣ ಮಹೋತ್ಸವ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
50 ಹೈನುಗಾರರಿಗೆ 50 ಹಸು ಖರೀದಿಸಲು ಪ್ರೋತ್ಸಾಹ ಧನ ನೀಡಲಾಗುವುದು. ಅಂದು ಬೆಳಗ್ಗೆ ಪುರಮೆರವಣಿಗೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುವಾರ್, ಮಂಗಳೂರು ಹಾಲು ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ, ಸಂಸದ ಬಿ.ವೈ.ರಾವೇಂದ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಉಳ್ಳೂರು-74 ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ, ಪ್ರವೀಣ್ ಕುವಾರ ಶೆಟ್ಟಿ, ರೋಹಿತ್ ಶೆಟ್ಟಿ, ಎಚ್.ಭೋಜ ಶೆಟ್ಟಿ, ಟಿ.ಜಿ.ಪಾಂಡುರಂಗ ಪೈ, ಎಸ್.ದಯಾನಂದ ರಾವ್ ಶಂಕರನಾರಾಯಣ, ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಮಂಜುನಾಥ ಮೊಗವೀರ, ನವೋದಯ ಸ್ವ-ಸಹಾಯ ಸಂದ ಕುಂದಾಪುರ ತಾಲೂಕು ಮೇಲ್ವಿಚಾರಕ ಎಚ್.ಮನೋಹರ ಶೆಟ್ಟಿ, ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ರಿತೇಶ್ ಕೊಠಾರಿ ಮೊದಲಾದವರಿದ್ದರು.