ನಾಗಪ್ರತಿಷ್ಠಾ ಮುಂಭಾಗವನ್ನು ಅಲಂಕಾರ ಮಾಡಿದ್ದ ದೇವಳದ ಸಿಬ್ಬಂದಿಯನ್ನು ಹರೀಶ್.ಎಸ್.ಇಂಜಾಡಿ ಸನ್ಮಾನಿಸಿದರು. ಪ್ರಮುಖರಾದ ಕೆ.ಯಶವಂತ ರೈ, ಶ್ರೀಕೃಷ್ಣ ಶರ್ಮ, ಅಜಿತ್ ಕುಮಾರ್ ಪಾಲೇರಿ, ಲೀಲಾ ಮನಮೋಹನ್ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕುಕ್ಕೆಯು ಕಲೆಗಳ ತವರೂರಾಗಿದ್ದು ಇಲ್ಲಿ ಸಾಂಪ್ರದಾಯಿಕ ಕಲೆಗಳಲ್ಲಿ ಪರಿಣತಿ ಹೊಂದಿದ ಅನೇಕ ಕಲಾವಿದರಿದ್ದಾರೆ. ಸಾಂಪ್ರದಾಯಿಕ ಮತ್ತು ಪ್ರಾಚೀನ ಕಲೆಯನ್ನು ಉಳಿಸಿ ಬೆಳೆಸಲು ಕುಕ್ಕೆ ದೇವಳ ನಿರಂತರ ಪ್ರೋತ್ಸಾಹವನ್ನು ನೀಡುತ್ತಿದೆ. ಜತೆಗೆ ಯಕ್ಷಗಾನ ಸೇರಿದಂತೆ ಇತರ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಹೇಳಿದರು.
ಅಲಂಕಾರ ಮಾಡಿದ ಮಲೆಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ ಕೋಡಿಕಜೆ, ಭಾಸ್ಕರ ಅರ್ಗುಡಿ, ಜಿತನ್ ದೇವರಗದ್ದೆ, ರುರಾಮ್, ಹೇಮಂತ್, ದಿನೇಶ್, ಪವನ್, ಶ್ರೇಯಸ್, ಶಿವ, ಜಯದೇವ್, ಸುಮಂತ್ ಅವರನ್ನು ಗೌರವಿಸಲಾಯಿತು.
ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಾರ್ಜುನ ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಡಾ.ಸತ್ಯನಾರಾಯಣ ಪುಣ್ಚಿತ್ತಾಯ, ಶ್ರೇಯಾ ರೋಹಿತ್, ನೆಕ್ಕರೆಮೂಲೆ ಗಣೇಶ್ ಭಟ್, ರೋಹಿತ್ ಉಚ್ಚಿಲ, ಮುರಾರಿ ಭಟ್ ಪಂಜಿಗದ್ದೆ ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ನಾವುಡ ಮಧೂರು, ಅಕ್ಷಯ್ ಕುವಾರ್ ವಾರ್ನಾಡು, ಲಕ್ಷ್ಮಣಕುವಾರ್ ಮರಕಡ, ಮಿಜಾರು ತಿಮ್ಮಪ್ಪ, ಶಂಭಯ್ಯ ಕಂಜರ್ಪಣೆ, ಕಿರಣ್ ಕೊಂಚಾಡಿ, ಶಶಿಕಿರಣ್ ಕಾವು, ವಿಶ್ವಾಸ್ ಕಾವೂರು ಯಕ್ಷಗಾನ ಪ್ರದರ್ಶಿಸಿದರು.