ಉಡುಪಿಯಲ್ಲಿ ಡಿ13ರಂದು ಬಿಡುಗಡೆಗೊಳ್ಳಲಿರುವ 'ಉಡುಪಿ ಶ್ರೀಕೃಷ್ಣ ಮಠ' ಕೃತಿ. 
ಉಡುಪಿ

ಉಡುಪಿಯಲ್ಲಿ ಜಾಗತಿಕ ಶಾಂತಿ ಸಮ್ಮೇಳನ ಡಿ.13ಕ್ಕೆ

* ಆಂಧ್ರಪ್ರದೇಶ ರಾಜ್ಯಪಾಲ ಸೈಯದ್​ ಅಬ್ದುಲ್​ ನಜೀರ್​ ಭಾಗಿ
* 'ಉಡುಪಿ ಶ್ರೀಕೃಷ್ಣ ಮಠ (ದೇವಾಲಯದ ಸಂಸತಿ ಸಿರಿ)' ಕೃತಿ ಬಿಡುಗಡೆ

ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಡಿ.13ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ "ವಿಶ್ವ ಶಾಂತಿ ಸಮ್ಮೇಳನ' ಆಯೋಜಿಸಲಾಗಿದ್ದು, ಆಂಧ್ರಪ್ರದೇಶ ರಾಜ್ಯಪಾಲ ಸೈಯದ್​ ಅಬ್ದುಲ್​ ನಜೀರ್​ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಪರ್ಯಾಯ ಯತಿಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದೆ.
ಚಿಕ್ಕಬಳ್ಳಾಪುರ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಯುನಿವರ್ಸಿಟಿಯ ಸ್ಥಾಪಕ ಕುಲಪತಿ ಸದ್ಗುರು ಶ್ರೀ ಮಧುಸೂದನ ಸಾಯಿ, ಮೂಡಬಿದಿರಿ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ರಿಲೀಜಿಯನ್ಸ್​ ಫಾರ್​ ಪೀಸ್​ನ ಸೆಕ್ರೆಟರಿ ಜನರಲ್​ ಎಮೆರೈಟಸ್​ ಡಾ. ವಿಲಿಯಂ ಎಫ್​. ವೆಂಡಲೈ, ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್​, ಎಂಎಲ್​ಸಿ ಐವನ್​ ಡಿಸೋಜಾ, ರಾಜೀವ ಗಾಂಧಿ ಯುನಿವರ್ಸಿಟಿ ಆರೋಗ್ಯ ವಿಜ್ಞಾನದ ಮಾಜಿ ನಿರ್ದೇಶಕ ಡಾ. ಕೆ.ಪಿ. ಪುತ್ತುರಾಯ ಪಾಲ್ಗೊಳ್ಳಲಿದ್ದಾರೆ. 

ಕೃತಿ ಲೋಕಾರ್ಪಣೆ

ಶ್ರೀಕೃಷ್ಣನ ಕೃಪಾಶೀರ್ವಾದದಿಂದ ಹಾಗೂ ಪುತ್ತಿಗೆ ಪರ್ಯಾಯ ಮಠದ ಸುಗುಣೇಂದ್ರ ತೀರ್ಥರ ಅನುಗ್ರಹದಿಂದ ಡಾ. ಚೂಡಾಮಣಿ ನಂದಗೋಪಾಲ್​ ಹಾಗೂ ಡಾ. ಅರುಣಾ ಕೆ.ಆರ್​. ರಚನೆಯ, ಕಪಾಲಿ ಇಂಡಿಯಾ ಟ್ರಸ್ಟ್​ ಫೌಂಡೇಷನ್​ ಪ್ರಕಾಶನದಲ್ಲಿ ಮುದ್ರಣಗೊಂಡಿರುವ ಉಡುಪಿ ಶ್ರೀಕೃಷ್ಣ ಮಠ (ದೇವಾಲಯದ ಸಂಸ್ಕೃತಿ ಸಿರಿ) ಕೃತಿ ಬಿಡುಗಡೆ ಆಗಲಿದೆ. 
800 ವರ್ಷದ ಹಿಂದೆ ದ್ವೆೃತ ಮತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪನೆಗೊಂಡ ಶ್ರೀಕೃಷ್ಣ ಮಠವು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಮಾಧ್ವ ವೈಷ್ಣವ ಸಂಪ್ರದಾಯವರಿಗೆ ಮಾತ್ರವಲ್ಲದೆ ಭಾರತೀಯರೆಲ್ಲರಿಗೂ ಉಡುಪಿ ಕ್ಷೇತ್ರವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಎಂಟು ಅಧ್ಯಾಯಗಳ ಈ ಕೃತಿಯು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ. ಇದರಲ್ಲಿ ಉಡಪಿಯ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.