ಉಡುಪಿಯಲ್ಲಿರುವ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸುಪ್ರಸಾದ್ ಶೆಟ್ಟಿ ಮಾತನಾಡಿದರು. ಆನಂದ ಸುವರ್ಣ, ನಾಗರಾಜ್ ಶೆಟ್ಟಿ, ಮೋಹನ್ ಭಟ್, ಸುಂದರ್ ಕಲ್ಮಾಡಿ, ನಂದನ್ ಜೈನ್, ವಿಷ್ಣುಮೂರ್ತಿ ಆಚಾರ್ಯ, ವಿಷ್ಣುಪ್ರಸಾದ್ ಪಾಡಿಗಾರ್, ರಾಘವೇಂದ್ರ ಶೆಟ್ಟಿ ಇದ್ದರು.
* ಸ್ವಾಗತ ಸಮಿತಿಯ ಸುಪ್ರಸಾದ್ ಶೆಟ್ಟಿ ಬೈಕಾಡಿ ಕೋರಿಕೆ
* ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಸಭೆ
ಉಡುಪಿ: ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯವು ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಲಿದೆ. ಶ್ರೀಗಳ ಪ್ರಥಮ ಪರ್ಯಾಯೋತ್ಸವ ಇದಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ಹೊರೆಕಾಣಿಕೆ ಸಮರ್ಪಣೆ ಆಗಬೇಕೆಂದು ಶಿರೂರು ಪರ್ಯಾಯ ಸ್ವಾಗತ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮನವಿ ಮಾಡಿದರು.
ಉಡುಪಿಯಲ್ಲಿರುವ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಾರ್ಯಾಲಯದಲ್ಲಿ ನಡೆದ ಯೋಜನೆಯ ಒಕ್ಕೂಟಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಮಠದೊಂದಿಗೆ ಅನ್ಯೋನ್ಯ ಸಂಬಂಧ
ಶ್ರೀಕೃಷ್ಣ ಮಠ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅನ್ಯೋನ್ಯ ಸಂಬಂಧವಿದ್ದು, ಪರಂಪರಾಗತವಾಗಿ ಹೊರೆಕಾಣಿಕೆ ಸಮರ್ಪಿತವಾಗುತ್ತಿದೆ. ಈ ಬಾರಿಯೂ ಸಹ ವ್ಯಾಪಾಕವಾಗಿ ಸಂಪರ್ಕಿಸಿ ಹೆಚ್ಚಿನ ಪ್ರಮಾಣದಲ್ಲಿ ಹೊರೆಕಾಣಿಕೆ ಸಂಗ್ರಹಿಸಿ ಸಮರ್ಪಿಸಿ ಸಹಕರಿಸಬೇಕು ಎಂದರು.
ಸಮರ್ಪಣೆಗೆ ತಯಾರಿ
ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿರುವ ಪ್ರತಿ ಒಕ್ಕೂಟಗಳಿಂದಲೂ ಹೊರೆಕಾಣಿಕೆ ಸಮರ್ಪಣೆಯ ಬಗ್ಗೆ ತಯಾರಿ ನಡೆಸಲಿದ್ದೇವೆ. ಯೋಜನೆಯ ಪೂರ್ಣ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಮಗಳನ್ನೂ ಸಂಪರ್ಕಿಸಿ ಪ್ರಾಮಾಣಿಕವಾಗಿ ಹೊರೆಕಾಣಿಕೆ ಸಂಗ್ರಹಿಸುವ ಕಾರ್ಯ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಶಿರೂರು ಪರ್ಯಾಯ ಸಮಿತಿಯ ಕಾರ್ಯದರ್ಶಿ ಮೋಹನ್ ಭಟ್ ಎಲ್ಲರ ಸಹಕಾರ ಕೋರಿದರು. ನಗರಸಭಾ ಮಾಜಿ ಸದಸ್ಯ ಸುಂದರ್ ಕಲ್ಮಾಡಿ, ಪರ್ಯಾಯ ಸಮಿತಿಯ ನಂದನ್ ಜೈನ್, ವಿಷ್ಣುಮೂರ್ತಿ ಆಚಾರ್ಯ, ವಿಷ್ಣುಪ್ರಸಾದ್ ಪಾಡಿಗಾರ್, ಒಕ್ಕೂಟದ ಪ್ರಮುಖರಾದ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಯೋಜನೆಯ ಕಾರ್ಯಕರ್ತೆ ಮಮತಾ ವಂದಿಸಿದರು.
ಬೆಳ್ತಂಗಡಿ ತಾಲೂಕಿನಿಂದ ಬೃಹತ್ ಹೊರೆಕಾಣಿಕೆ
* ಶಾಸಕ ಪೂಂಜಾ ಭರವಸೆ
ಉಡುಪಿ ಶಿರೂರು ಮಠದ ವೇದವರ್ಧನ ಶ್ರೀಗಳ ಪರ್ಯಾಯೋತ್ಸವಕ್ಕೆ ಬೆಳ್ತಂಗಡಿ ತಾಲೂಕಿನಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆ ಆಗಲಿದೆ ಎಂದು ಶಾಸಕ ಹರೀಶ್ ಪೂಂಜಾ ಭರವಸೆ ನೀಡಿದರು. ಉಜಿರೆಯ ಶಾರದಾ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ ಉಡುಪಿ ಪರ್ಯಾಯ ಮಹೋತ್ಸವದ ಅದ್ದೂರಿ ಆಚರಣೆಗೆ ಈ ಭಾಗದಿಂದಲೂ ಸಹಕಾರ ನೀಡಲಾಗುವದು ಎಂದರು. ಸ್ವಾಗತ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಶಿರೂರು ಪರ್ಯಾಯದ ಆಮಂತ್ರಣ ನೀಡಿದರು. ಜನಾರ್ದನ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶರತ್ಕೃಷ್ಣ ಪಿ., ಉದ್ಯಮಿ ಮೋಹನಕುಮಾರ್, ಗ್ರಾಪಂ ಅಧ್ಯಕ್ಷ ಉಷಾಕಿರಣ್, ಮಧುಕರ್, ಸಮಿತಿಯ ವಿಷ್ಣುಪ್ರಸಾದ್ ಪಾಡಿಗಾರ್, ಶ್ರೀನಿವಾಸ್ ಭಾದ್ಯ ಇದ್ದರು.