ಕಾಸರಗೋಡು: ಟ್ಯೂಷನ್‌ಗೆ ತೆರಳುತ್ತಿದ್ದ 6ನೇ ತರಗತಿ ವಿದ್ಯಾರ್ಥಿನಿಯನ್ನು ತಳ್ಳಿ ಆಕೆಯ ಕೈ ಎಲುಬು ಮುರಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಮಹಿಳೆಯೊಬ್ಬಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
ಕಣಿಪುರ ದೇವಳ ಸಮೀಪದ ನಿವಾಸಿ ಮಹಿಳೆ ಆರೋಪಿ. ಕುಂಬಳೆ ಶೆಡಿಕಾವು ನಿವಾಸಿ 11ರ ಹರೆಯದ ಬಾಲಕಿ ಶುಕ್ರವಾರ ಕಣಿಪಿರ ದೇವಳ ಸಮೀಪವಿರುವ ತನ್ನ ಟ್ಯೂಷನ್ ಟೀಚರ್ ಮನೆಗೆ ತೆರಳುತ್ತಿದ್ದ ಸಂದರ್ಭ ಆರೋಪಿ ಮಹಿಳೆಯು ವಿದ್ಯಾರ್ಥಿನಿಯನ್ನು ತಡೆದು ಟ್ಯೂಷನಿಗೆ ತೆರಳದಂತೆ ಬೆದರಿಸಿ ಬಳಿಕ ಆಕೆಯನ್ನು ಬದಿಗೆ ತಳ್ಳಿದ್ದಾಳೆ. ಈ ವೇಳೆ ಬಾಲಕಿಯ ಬಲಗೈ ಮುರಿದಿದೆ.
ಆರೋಪಿ ಮಹಿಳೆಯು ಟ್ಯೂಷನ್ ಟೀಚರ್ ವಿರುದ್ಧ ಹೊಂದಿದ್ದ ದ್ವೇಷವೇ ಘಟನೆಗೆ ಕಾರಣವಾಗಿದೆ.