ಆದಿಉಡುಪಿಯಲ್ಲಿ ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ ಕರ್ನಲ್​ ಡಾ. ಎಫ್​ಇಎ ರೋಡ್ರಿಗಸ್​ ಅಧ್ಯಕ್ಷತೆಯಲ್ಲಿ ನಡೆಯಿತು. ಪರಮಶಿವ, ಕಮಡೋರ್​ ಜೆರೋಮ್​ ಕ್ಯಾಸ್ಟಲಿನ್​, ಗಣೇಶ್​ ರಾವ್​, ಗಣಪಯ್ಯ ಶೇರಿಗಾರ್​, ಗಿಲ್ಬರ್ಟ್​ ಬ್ರಿಗಾಂಝಾ, ಪ್ರಭಾಕರ್​ ನಾಯ್ಕ್​, ತುಳಸಿ ದೇವಾಡಿಗ, ಸುಮತಿ ಶ್ರೀಧರ್​ ಇತರರಿದ್ದರು. 
ಉಡುಪಿ

ಸಂಘದ ಸದಸ್ಯರಿಗೆ ಶೇ.22 ಲಾಭಾಂಶ

* ಅಧ್ಯಕ್ಷ ಕರ್ನಲ್​ ಡಾ. ಎಫ್​ಇಎ ರೋಡ್ರಿಗಸ್​ ಘೋಷಣೆ

* ಆದಿಉಡುಪಿಯಲ್ಲಿ ಮಾಜಿ ಸೈನಿಕರ ಸಹಕಾರಿ ಮಹಾಸಭೆ

ಉಡುಪಿ: ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘವು ಸತತವಾಗಿ 'ಎ' ಗ್ರೇಡ್​ ಹೊಂದಿದ್ದು, 2025-26ನೇ ಸಾಲಿನಲ್ಲಿ ಒಟ್ಟು 325 ಕೋಟಿ ರೂ. ವ್ಯವಹಾರ ನಡೆಸಿದೆ. 40 ಕೋಟಿ ರೂ. ಸಾಲ ಹೊರಬಾಕಿಯಿದ್ದು, 1.79 ಕೋಟಿ ರೂ. ನಿವ್ವಳ ಲಾಭಗಳಿಸಿದೆ. ಶೇ.99 ಸಾಲ ವಸೂಲಾತಿ ಸಾಧನೆಯಾಗಿದ್ದು ಸದಸ್ಯರಿಗೆ ಶೇ.22 ಲಾಭಾಂಶ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ  ಕರ್ನಲ್​ ಡಾ. ಎಫ್​ಇಎ ರೋಡ್ರಿಗಸ್​ ತಿಳಿಸಿದರು.
ಆದಿಉಡುಪಿಯ ಅಂಬೇಡ್ಕರ್​ ಸಮುದಾಯ ಭವನದಲ್ಲಿ ಭಾನುವಾರ (ಜು.26) ಆಯೋಜಿಸಿದ್ದ ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘದ 2025&26ನೇ ಸಾಲಿನ ಮಹಾಸಭೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರಿಗೆ ಸನ್ಮಾನ

ಮಾಜಿ ಸೈನಿಕರ ಸಹಕಾರ ಸಂಘ ಹಾಗೂ ವೇದಿಕೆ ಜಂಟಿಯಾಗಿ 80 ವರ್ಷ ಮೇಲ್ಪಟ್ಟ ಮಾಜಿ ಸೈನಿಕರಾದ ಎವಿಎಂ ರಮೇಶ್​ ಕಾರ್ಣಿಕ್​, ನಿವೃತ್ತ ಸಬ್​ ಮೇಜರ್​ ಪಿ.ರಾಧಾಕೃಷ್ಣ ಶೆಣೈ, ಸಬ್​ ಮೇಜರ್​ ದಿನೇಶ್​ ಕಿಣಿ, ಸಬ್​. ಕ್ಲೇಮೆಂಟ್​ ಡಿಸಿಲ್ವ, ಸಿಪಿಎಲ್​ ಫೆರ್ನಾಂಡಿಸ್​ ಡೆಸ್ಮಂಡ್​ ಪೀಟರ್​, ಸಿಪಿಎಲ್​ ವಲ್ಲೇರಿಯನ್​ ನರೋನ್ಹ, ಸಿಪಿಎಲ್​ ದಿನೇಶ್​ ನಾಯಕ್​, ಸಿಪಾಯಿ ಕೆ.ರಮೇಶ್​ ಅವರನ್ನು ಸನ್ಮಾನಿಸಲಾಯಿತು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರನ್ನೂ ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. 
ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸಂಘದ ನಿರ್ದೇಶಕರಾದ ಗಣೇಶ್​ ರಾವ್​, ಗಣಪಯ್ಯ ಶೇರಿಗಾರ್​, ಗಿಲ್ಬರ್ಟ್​ ಬ್ರಿಗಾಂಝಾ, ಪ್ರಭಾಕರ್​ ನಾಯ್ಕ್​, ತುಳಸಿ ದೇವಾಡಿಗ, ಸುಮತಿ ಶ್ರೀಧರ್​, ಕೆ.ಡೊರೊತಿ ಕ್ರಾಸ್ಟಾ, ವಿಶ್ವನಾಥ್​ ಹಂದೆ, ರಾಘವೇಂದ್ರ ಪಿ.ಎಸ್​., ಕಿರಣ್​ ಪೈ, ದಯಾನಂದ್​ ಸಿ. ಪುತ್ರನ್​, ಸಂತೋಷ್​ ನಾಯ್ಕ್​ ಉಪಸ್ಥಿತರಿದ್ದರು.
ಸಂಘದ ಸಿಇಒ ಪರಮಶಿವ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಕಮಡೋರ್​ ಜೆರೋಮ್​ ಕ್ಯಾಸ್ಟಲಿನ್​ ವಂದಿಸಿದರು.