ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಡೆದ ಗಾಯತ್ರಿ ಹವನದಲ್ಲಿ ಸುಭಾಸ್ ಕಾಮತ್ ಹಾಗೂ ಸಂಧ್ಯಾ ಕಾಮತ್ ದಂಪತಿ ಪಾಲ್ಗೊಂಡರು. ಗುಜ್ಜಾಡಿ ಪ್ರಭಾಕರ್ ನಾಯಕ್, ವಿನಾಯಕ ಭಟ್, ದಯಾಘನ ಭಟ್, ದೀಪಕ್ ಭಟ್, ಲಕ್ಷೀನಾರಾಯಣ ಭಟ್ ಇತರರಿದ್ದರು.
* ಆಭರಣ ಜುವೆಲರ್ಸ್ ಮಾಲೀಕರಿಂದ ವಿಶೇಷ ಪೂಜೆ
* ಅಧಿಕ ಮಾಸದ ನಿಮಿತ್ತ ಧಾರ್ಮಿಕ ಕಾರ್ಯಕ್ರಮ
ಉಡುಪಿ: ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಅಧಿಕ ಮಾಸದ ನಿಮಿತ್ತ ಭಾನುವಾರ ಗಾಯತ್ರಿ ಹವನ ನಡೆಯಿತು. ಸೇವಾದಾರರಾದ ಉಡುಪಿ ಆಭರಣ ಜುವೆಲರ್ಸ್ನ ಮಾಲೀಕರಾದ ಸುಭಾಸ್ ಕಾಮತ್ ಹಾಗೂ ಸಂಧ್ಯಾ ಕಾಮತ್ ದಂಪತಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
ದೇವಳದ ಅರ್ಚಕರಾದ ವಿನಾಯಕ ಭಟ್, ದಯಾಘನ ಭಟ್, ದೀಪಕ್ ಭಟ್, ಲಕ್ಷ್ಮೀನಾರಾಯಣ ಭಟ್ ಇತರರು ಧಾರ್ಮಿಕ ಪೂಜಾ ವಿಧಾನ ನೆರವೇರಿಸಿದರು.
ಹವನದ ನಿಮಿತ್ತ ದೇವರಿಗೆ ಪಂಚಾಮೃತ ಅಭಿಷೇಕದ ಬಳಿಕ ವಿಶೇಷ ಅಲಂಕಾರ ಮಾಡಲಾಯಿತು. ಯಾಗದ ಪೂರ್ಣಾಹುತಿಯ ನಂತರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಮಾರಾಧನೆ ನೆರವೇರಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್, ಆಡಳಿತ ಮಂಡಳಿಯ ಸದಸ್ಯರು, ಸ್ವಯಂ ಸೇವಕರು, ವಿವಿಧ ಸೇವಾದಾರರು, ಜಿಎಸ್ಬಿ ಯುವಕ ಹಾಗೂ ಮಹಿಳಾ ಮಂಡಳಿಯ ಸದಸ್ಯರು, ನೂರಾರು ಭಕ್ತರು ಪಾಲ್ಗೊಂಡಿದ್ದರು.