ಶ್ರೀಕಾಂತ್ ಪೂಜಾರಿ ಅವರ ಆಟೋ.
ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿಯ ಬಂಕ್‌ಗಳಲ್ಲಿ ಗ್ಯಾಸ್ ಕೊರತೆ ಉಂಟಾಗಿ ರಿಕ್ಷಾ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಮತ್ತೊಂದೆಡೆ ಗ್ಯಾಸಿಗೆ ಅಧಿಕ ಮೊತ್ತ ಪಾವತಿಸಿ ಗ್ಯಾಸ್ ಪಡೆಯುವ ಸಂಧಿಗ್ದ ಪರಿಸ್ಥಿತಿ ಎದುರಾಗಿದೆ.
ಇನ್ನು ಗ್ಯಾಸ್ ಪಡೆಯಲು ಮೂರರಿಂದ ನಾಲ್ಕು ದಿನಗಳ ಕಾಲ ಕಾಯಬೇಕಾಗಿರುವುದು ಅನಿವಾರ್ಯವಾಗಿದೆ. ಜಿಲ್ಲೆಯಲ್ಲಿ ಒಂದೊಂದು ಕಡೆಯಲ್ಲಿ ಒಂದೊಂದು ದರ ನಿಗದಿಯಾಗಿದೆ. ಹೆಬ್ರಿಯಲ್ಲಿ ಶತಕ ದಾಟಿದ್ದು, ಉಡುಪಿ, ಕಾರ್ಕಳ, ಕುಂದಾಪುರ, ಸಿದ್ದಾಪುರದಲ್ಲಿ ಒಂದೊಂದು ದರ ನಿಗದಿಪಡಿಸಲಾಗಿದೆ.
ದರ ಹೆಚ್ಚಾಗಿರುವುದರಿಂದ ಬಾಡಿಗೆ ವಾಡಲು ಕಷ್ಟವಾಗುತ್ತಿದೆ. ಬಾಡಿಗೆ ವಾಡದಿದ್ದಲ್ಲಿ ಜೀವನ ನಡೆಯುವುದಿಲ್ಲ. ಗ್ರಾಮೀಣ ಭಾಗದ ಬಡ ಜನರ ಬಳಿ ಹೆಚ್ಚು ಹಣವನ್ನಾದರೂ ಹೇಗೆ ಕೇಳುವುದೆಂದು ರಿಕ್ಷಾ ಚಾಲಕರು ಬೇಸರ ವ್ಯಕ್ತಪಡಿಸುತ್ತಾರೆ.
ಬಾಡಿಗೆ ಹೆಚ್ಚಳ ಅನಿವಾರ್ಯ
ಏಕಾಏಕಿ ಗ್ಯಾಸ್ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಟೋ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಕಿಲೋಮೀಟರ್‌ಗೆ 10ರಿಂದ 20 ರೂ. ಹೆಚ್ಚಾಗುವ ಸಾಧ್ಯತೆ ಇದೆ. ಸಾವಾನ್ಯ ವರ್ಗದವರಿಗೆ ಇದು ಹೊರೆಯಾಗಿ ಪರಿಣಮಿಸಲಿದೆ.
ಕಟ್ಟಿಗೆ ಮೊರೆಹೋದ ಹೋಟೆಲ್‌ಗಳು!
ಹೆಬ್ರಿಯ ಪ್ರಮುಖ ಹೋಟೆಲ್‌ಗಳು ಕಮರ್ಷಿಯಲ್ ಗ್ಯಾಸ್ ಕೊರತೆಯಿಂದ ಕಟ್ಟಿಗೆ ಮೊರೆ ಹೋಗಿದ್ದಾರೆ. ಗ್ಯಾಸ್ ಹೆಚ್ಚು ವ್ಯಯವಾಗುತ್ತದೆ ಎಂದು ಕೆಲವು ಹೋಟೆಲ್‌ಗಳಲ್ಲಿ ಕೆಲವು ತಿಂಡಿ, ಆಹಾರ ಪದಾರ್ಥಗಳನ್ನು ಕಡಿತಗೊಳಿಸಿದ್ದಾರೆ. ಬಹುತೇಕರು ಕಟ್ಟಿಗೆ ಬಳಸಿ ಅಡುಗೆ ತಯಾರಿ ವಾಡುತ್ತಿದ್ದಾರೆ. ಗ್ಯಾಸ್ ಲಭ್ಯತೆ ಕೊರತೆಯಿಂದ ಹೆಬ್ರಿಯ ಸಣ್ಣ ಹೋಟೆಲ್‌ಗಳಿಗೆ ದೊಡ್ಡ ಹೊಡೆತ ಉಂಟಾಗಿದೆ.
ಯುದ್ಧವನ್ನೇ ಅಸವಾಗಿಸಿಕೊಂಡು ದಿನನಿತ್ಯ ದುಡಿಯುವ ಮಧ್ಯಮ ವರ್ಗದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಂದ ಗ್ಯಾಸ್ ಏಜೆನ್ಸಿಗಳು ಹಣ ಪೀಕಿಸುತ್ತಿವೆ. 64 ರೂ. ಇದ್ದ ಗ್ಯಾಸ್ ಈಗ ನೂರು ರೂ. ಹಣ ಕೊಟ್ಟರೂ ತುರ್ತಾಗಿ ಸಿಗುತ್ತಿಲ್ಲ. ಹಳೇ ದರದಲ್ಲಿ ಬಾಡಿಗೆ ವಾಡಿದರೆ ಗ್ಯಾಸ್‌ಗೆ ಹಣ ಸಾಲುತ್ತಿಲ್ಲ. ಒಟ್ಟಿನಲ್ಲಿ ನಮ್ಮ ಕಷ್ಟವನ್ನು ಯಾರಿಗೂ ಹೇಳತೀರದು. ಸಂಬಂಧಪಟ್ಟವರು ಹೆಬ್ರಿಯಲ್ಲಿ ಗ್ಯಾಸ್ ಸಂಪರ್ಕ ವ್ಯವಸ್ಥೆಗೆ ಸೂಕ್ತ ಕ್ರಮ ಜರುಗಿಸಬೇಕು.
ಯಾವ ಬಂಕ್‌ನಲ್ಲಿಯೂ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಪಡೆದು ಗ್ಯಾಸ್ ವಾರಾಟ ವಾಡುವಂತಿಲ್ಲ. ಈ ರೀತಿ ಕಂಡುಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಹೆಬ್ರಿಯಲ್ಲಿ ಆಗಿರುವ ಸಮಸ್ಯೆ ಬಗ್ಗೆ ವಾಹಿತಿ ಪಡೆಯುತ್ತೇನೆ.