ಮೊಗ್ರಾಲ್ ನದಿ ದಂಡೆಯಲ್ಲಿ ಎಸೆಯಲಾದ ತ್ಯಾಜ್ಯವನ್ನು ಹಸಿರು ಕ್ರಿಯಾಸೇನೆ ಕಾರ್ಯಕರ್ತರು ವಿಲೇವಾರಿ ಮಾಡಿದರು. 
ಉಡುಪಿ

ಮೊಗ್ರಾಲ್ ನದಿ ದಂಡೆಯಲ್ಲಿ ತ್ಯಾಜ್ಯ ಎಸೆತ

ಕುಂಬಳೆ: ಮೊಗ್ರಾಲ್ ನದಿ ದಂಡೆಯಲ್ಲಿರುವ ಮ್ಯಾಂಗ್ರೋವ್ ಕಾಡುಗಳು ಮತ್ತು ಜಲಮೂಲಗಳಲ್ಲಿ ರಾತ್ರಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ ಮತ್ತು ನದಿ ದಂಡೆಯಲ್ಲಿ ತ್ಯಾಜ್ಯ ಸುಡಲಾಗುತ್ತಿದೆ ಎಂಬ ಕೊಪ್ಪಳ ಫ್ರೆಂಡ್ಸ್ ಕ್ಲಬ್ ಸಲ್ಲಿಸಿದ ದೂರಿನ ಮೇರೆಗೆ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಕುಂಬಳೆ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಡಿಸಿ ಸೂಚನೆ ಮೇರೆಗೆ ಕುಂಬಳೆ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ವಿಭಾಗವು ಆರೋಗ್ಯ ಪರಿವೀಕ್ಷಕಿ ಸೌಮ್ಯಾ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿತು. ನದಿ ದಂಡೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುರಿಯಲಾಗಿದ್ದ ತ್ಯಾಜ್ಯವನ್ನು ಹಸಿರು ಕ್ರಿಯಾಸೇನೆಯ ಸದಸ್ಯರು ಪರಿಶೀಲಿಸಿ ವಿಲೇವಾರಿ ಮಾಡಿದರು. ಕೊಪ್ಪಳ ಫ್ರೆಂಡ್ಸ್ ಕ್ಲಬ್ ಪ್ರತಿನಿಧಿ ಜಲೀಲ್ ಕೊಪ್ಪಳ ಇದ್ದರು.

ಜಿಲ್ಲಾಧಿಕಾರಿಗಳಿಗೆ ವಿವರವಾದ ವರದಿ ಸಲ್ಲಿಸಲಾಗುವುದು ಮತ್ತು ತ್ಯಾಜ್ಯ ಎಸೆಯುವವರ ವಿರುದ್ಧ 25,000 ರೂ.ಗೂ ಅಧಿಕ ದಂಡ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಎಚ್.ಐ.ಸೌಮ್ಯಾ, ಆರೋಗ್ಯ ಪರಿವೀಕ್ಷಕಿ