ಸ್ವಚ್ಛ ಮನೆ ಸ್ವಯಂಘೋಷಣೆ, ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್., ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಕಾನೂನು ಪಾಲನೆಯಾಗದೆ ಕಸ ನಿಯಂತ್ರಣ ಅಸಾಧ್ಯ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವುವವರ ವಿರುದ್ಧ ಒಂದು ಲಕ್ಷದವರೆಗೆ ದಂಡ ವಿಧಿಸುವಂತಹ ಕಾನೂನು ಇದೆ. ಆದರೆ ಸರ್ಕಾರದ ಸುತ್ತೋಲೆ, ಜಿಲ್ಲಾಮಟ್ಟಕ್ಕೆ ಬರುವಾಗ ಸುತ್ತೋಲೆ ಆಗುತ್ತಿದ್ದು ಕಾನೂನು ಸಮರ್ಪಕವಾಗಿ ಪಾಲನೆ ಮಾಡದ ಹಿನ್ನೆಲೆಯಲ್ಲಿ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅಭಿಪ್ರಾಯಪಟ್ಟರು.
ಮಾದರಿ ಗ್ರಾಮ ಅಭಿಯಾನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು, ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕೃತ ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ಸಮುದಾಯ ಆರೋಗ್ಯ ಅರಿವು ಅಭಿಯಾನ, ಕಸ ಮುಕ್ತ ಗ್ರಾಮ-ಕ್ಯಾನ್ಸರ್ ಮುಕ್ತ ಗ್ರಾಮ, ಸ್ವಚ್ಛ ಮನೆ ಸ್ವಯಂ ಘೋಷಣೆ, ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಡಿಪು ಬೆಟ್ಟದಲ್ಲಿ ಮುಂದಿನ ತಿಂಗಳು ಉತ್ಸವ ನಡೆಸುವ ಯೋಜನೆ ಹಮ್ಕಿಕೊಳ್ಳಲಾಗಿದೆ. ಈ ಉತ್ಸವ ಪ್ಲಾಸ್ಟಿಕ್‌ಮುಕ್ತ ಸಂಪೂರ್ಣ ಸ್ವಚ್ಛತೆ ಆಗುವ ನಿಟ್ಟಿನಲ್ಲಿ ಇಂದು ನಡೆಯುವ ಸಂವಾದ ಪೂರಕವಾಗಬೇಕಿದೆ ಎಂದರು.
ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಶಿಧರ್ ಪೊಯ್ಯತ್ತಬೈಲ್, ರಾಜ್ಯ ಸದಸ್ಯ ಶ್ರೀನಿವಾಸ ನಾಯಕ್, ನಿಟ್ಟೆ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಮೌಲ್ಯ ಡಿ. ಮೊದಲಾದವರು ಉಪಸ್ಥಿತರಿದ್ದರು. ಸಂಘ ಕಾರ್ಯದರ್ಶಿ ದಿನೇಶ್ ನಾಯಕ್ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಪುಂಡಿಕೈ ನಿರೂಪಿಸಿದರು.

ಪರಿಸರ ಉಳಿಸಲು ಗಿಡ ನೆಡುವುದು ಮುಖ್ಯವಲ್ಲ. ನೆಟ್ಟ ಗಿಡ ಉಳಿಸುವ ನಿಟ್ಟಿನಲ್ಲಿ ಮೂರುವರೆ ವರ್ಷ ಪೋಷಿಸುವ ಜವಾಬ್ದಾರಿ ಇದೆ. ಮಂಗಳೂರನ್ನು ಹಣ್ಣುಗಳ ನಗರವನ್ನಾಗಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆ ಹಮ್ಮಿಕೊಳ್ಳಲಾಗಿದೆ. ಜೈಪುರ ಫಿಲ್ಮ್ ಸಿಟಿಯಂತೆ ಮಂಗಳೂರು ಹಣ್ಣುಗಳ ನಗರ ಎಂದು ಗುರುತಿಸುವ ಗುರಿ ಹೊಂದಲಾಗಿದೆ.