ರಾಘವೇಂದ್ರ ಪೈ ಗಂಗೊಳ್ಳಿ
ಗಂಗೊಳ್ಳಿ ಬಂದರಿನ ಜೆಟ್ಟಿ ಕುಸಿತಕ್ಕೆ 5 ವರ್ಷ ಸಂದರೂ ಇನ್ನೂ ಪರಿಹಾರ ಸಿಕ್ಕಿಲ್ಲ. 2022ರಲ್ಲಿ ಜೆಟ್ಟಿಯ 50 ಮೀಟರ್‌ನಷ್ಟು ಭಾಗ ಕುಸಿದು ಸಮುದ್ರ ಸೇರಿತ್ತು. ಆದರೆ ಇಲ್ಲಿ ತನಕ ದುರಸ್ತಿಯಾಗದೆ ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ.
2018ರಲ್ಲಿ ಬಂದರಿನ 405 ಮೀಟರ್ ಉದ್ದದ ಜೆಟ್ಟಿ ಅಲ್ಲಲ್ಲಿ ಕುಸಿತ ಸಂಭವಿಸಿತ್ತು. ಹೀಗಾಗಿ ಸರ್ಕಾರ 12 ಕೋಟಿ ರೂ. ವೆಚ್ಚದಲ್ಲಿ 379 ಮೀಟರ್ ಉದ್ದದ ಹೊಸ ಜೆಟ್ಟಿ ಮರು ನಿರ್ವಾಣಕ್ಕೆ ಚಾಲನೆ ನೀಡಿತ್ತು. 2022ರಲ್ಲಿ ನಿರ್ವಾಣ ಹಂತದಲ್ಲೇ ಮತ್ತೆ ಕುಸಿತ ಸಂಭವಿಸಿತ್ತು.
ಜೆಟ್ಟಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಕೆಲಸ ಆರಂಭಿಸಲೆಂದು 2023ರ ಡಿಸೆಂಬರ್‌ನಲ್ಲಿ ತಯಾರಿ ನಡೆಸಿದ್ದರು. ಈ ನಡುವೆ ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಡಿಸೈನ್ ಬದಲಾಯಿಸುವಂತೆ ತಿಳಿಸಿದ್ದಲ್ಲದೆ ಸಿಐಸಿಎಫ್ ವರದಿಯಂತೆ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದ್ದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭ ಕಳಪೆ ಕಾಮಗಾರಿ ಪ್ರಶ್ನಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವುದರಿಂದ ಕುಸಿದ ಜೆಟ್ಟಿ ನಿರ್ವಾಣ ಕಾರ್ಯ ನನೆಗುದಿಗೆ ಬಿದ್ದಿದೆ.
ಸೀಮಿತ ಜಾಗದಲ್ಲಿ ಬೋಟ್ ನಿಲುಗಡೆಗೆ ಹಾಗೂ ಮೀನು ದಡ ಸೇರಿಸಲು ಅಡೆತಡೆಯಿದೆ. ಸರ್ಕಾರ ಮತ್ತು ಸಂಬಂಧಿತ ಇಲಾಖೆ ಗಮನಹರಿಸಿ ಕುಸಿದ ಜೆಟ್ಟಿಯ ಮರು ದುರಸ್ತಿ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಬೇಕು ಎಂಬ ಮೀನುಗಾರರ ಆಗ್ರಹಕ್ಕೆ ಮನ್ನಣೆ ಸಿಕ್ಕಿಲ್ಲ. ಈ ಮೀನುಗಾರಿಕಾ ಋತುವಿನ ಆರಂಭದೊಳಗೆ ದುರಸ್ತಿಯಾಗಬಹುದೆಂಬ ಮೀನುಗಾರರ ನಿರೀಕ್ಷೆ ಹುಸಿಯಾಗಿದೆ.
ಬಂದರಿನ ಕುಸಿದ ಜೆಟ್ಟಿ ಮರು ದುರಸ್ತಿಗೆ ಎದುರಾಗಿರುವ ತಾಂತ್ರಿಕ ಆಡಚಣೆ ನಿವಾರಣೆಗೆ ಪ್ರಯತ್ನ ನಡೆಯುತ್ತಿದೆ. ಸಮಸ್ಯೆ ಬಗೆಹರಿದ ಬಳಿಕ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.ಪ್ರಸನ್ನ ಮೀನುಗಾರಿಕೆ ಇಲಾಖೆ ಇಂಜಿನಿಯರ್
ಕುಸಿದ ಜೆಟ್ಟಿ ಮರು ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ. ಹಳೇ ಬಂದರು, ಹೊಸ ಬಂದರು ನಡುವೆ ಜರ್ಜರಿತ ದಂಡೆ ದುರಸ್ತಿಯೂ ನಡೆದಿಲ್ಲ. ಪ್ರಾಚೀನ ವ್ಯಾಂಗನೀಸ್ ವಾರ್ಪ್‌ನ ಸ್ಥಿತಿ ಬದಲಾಗಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಾಗ ಬೋಟ್ ನಿಲುಗಡೆ, ಮೀನು ವಾರಾಟಕ್ಕೆ ಉತ್ತಮ ವ್ಯವಸ್ಥೆ ಆಗಲಿದೆ.ಕೃಷ್ಣ ಖಾರ್ವಿ, ಗಂಗೊಳ್ಳಿ