ಉಡುಪಿಯಲ್ಲಿ ಗಂಗಾವತಿ ಪ್ರಾಣೇಶ್ ಅವರಿಗೆ 'ಹಾಸ್ಯ ಸಾಮ್ರಾಟ್' ಬಿರುದು ನೀಡಲಾಯಿತು. ಡಾ. ಶಶಿಕಿರಣ್ ಶೆಟ್ಟಿ, ಮನು ಹಂದಾಡಿ, ಬಸವರಾಜ್ ಮಹಾಮನಿ, ಡಾ. ಬೆಣ್ಣೆ ಬಸವರಾಜ್, ಡಾ.ಸುಮಾ ಶೆಟ್ಟಿ, ಬಂಗಾರಪ್ಪ ಉದಯ್ ನಾಯ್ಕ್, ಅರುಣ್ ಜತ್ತನ್ ಇತರರಿದ್ದರು.
* ಉಡುಪಿಯಲ್ಲಿ 'ಸ್ವರ್ಗದಲ್ಲೊಂದು ಹಾಸ್ಯ ಸಂಜೆ' ಕಾರ್ಯಕ್ರಮ
ಉಡುಪಿ: ಹೋಂ ಡಾಕ್ಟರ್ಸ್ ಫೌಂಡೇಷನ್ ಉಡುಪಿ ಪ್ರವರ್ತಿತ ಸ್ವರ್ಗ ಆಶ್ರಮ ಕೊಳಲಗಿರಿ ಇದರ ಕಟ್ಟಡ ಸಹಾಯಾರ್ಥಕವಾಗಿ ಕೊಳಲಗಿರಿಯ ಸಿಂಧೂರ ಸಭಾಂಗಣದಲ್ಲಿ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಭಾನುವಾರ ರಾತ್ರಿ (ಮೇ 17) 'ಸ್ವರ್ಗದಲ್ಲೊಂದು ಹಾಸ್ಯ ಸಂಜೆ' ಕಾರ್ಯಕ್ರಮ ನಡೆಯಿತು.
ಗಂಗಾವತಿ ಪ್ರಾಣೇಶ್ ಅವರಿಗೆ 'ಹಾಸ್ಯ ಸಾಮ್ರಾಟ್' ಬಿರುದು ನೀಡಿ ಗೌರವಿಸಲಾಯಿತು. ಮನು ಹಂದಾಡಿ, ಬಸವರಾಜ್ ಮಹಾಮನಿ, ಡಾ. ಬೆಣ್ಣೆ ಬಸವರಾಜ್ ಅವರಿಂದ ಹಾಸ್ಯದ ಹಬ್ಬ ನಡೆಯಿತು. ಈ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಷನ್ನ ಮುಖ್ಯಸ್ಥ ಡಾ. ಶಶಿಕಿರಣ್ ಶೆಟ್ಟಿ ಅವರನ್ನು ಕಲಾವಿದರು ಗೌರವಿಸಿದರು.
ಫೌಂಡೇಷನ್ನ ಸದಸ್ಯರಾದ ಡಾ.ಸುಮಾ ಶೆಟ್ಟಿ, ಬಂಗಾರಪ್ಪ ಉದಯ್ ನಾಯ್ಕ್, ಅರುಣ್ ಜತ್ತನ್, ಪ್ರವಿಣ್ ಜತ್ತನ್, ಜೀವನ್ ಜತ್ತನ್, ಸುದರ್ಶನ್ ಜತ್ತನ್, ಕಿರಣ್ ಜತ್ತನ್, ಮಿಲಿತ್ ಹೆಗ್ಡೆ, ರಾಘವೇಂದ್ರ ಪೂಜಾರಿ, ವಾಣಿಶ್ರೀ, ಸುಂದರ್ ಪೂಜಾರಿ, ರಾಘವೇಂದ್ರ ಕರ್ವಾಲು, ಸಂಧ್ಯಾ ಶೆಣೈ ಇತರರು ಉಪಸ್ಥಿತರಿದ್ದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.