ಉಡುಪಿಯ ಪರ್ಕಳದಲ್ಲಿ ಆಯೋಜಿಸಿದ್ದ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸಚ್ಚಿದಾನಂದ ನಾಯಕ್ ಉದ್ಘಾಟಿಸಿದರು. ಗಣೇಶ್ ಕುಲಾಲ್, ಗಣೇಶ್ ಸಣ್ಣಕ್ಕಿಬೆಟ್ಟು, ಸಂದೀಪ್ ನಾಯ್ಕ್, ಸಂತೋಷಕುಮಾರ್, ರಾಘವೇಂದ್ರ ನಾಯಕ್, ಲತಾ ಸುರೇಶ್, ಗಿರೀಶ್ ನಾಯಕ್ ಇತರರಿದ್ದರು.
* ಪಾಲಕರಿಗೆ ಸಚ್ಚಿದಾನಂದ ನಾಯಕ್ ಸಲಹೆ
* ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ
ಉಡುಪಿ: ಚಿಣ್ಣರಲ್ಲಿರುವ ಕಲಾ ಕೌಶಲ ತೆರೆದಿಡಲು ಚಿಕತ್ರಕಲಾ ಸ್ಪರ್ಧೆಗಳು ಸಹಕಾರಿ. ಹೀಗಾಗಿ ವಿವಿಧ ಸಂಟನೆಗಳು ಸಾಂದರ್ಭಿಕವಾಗಿ ಆಯೋಜಿಸುವ ಯಾವುದೇ ಸ್ಪರ್ಧೆಗೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಿ ಪ್ರೋತ್ಸಾಹಿಸಬೇಕು. ಅವರು ಬಹುಮಾನ ಪಡೆಯದಿದ್ದರೂ ತೊಂದರೆಯಿಲ್ಲ. ಕಲೆಗಳಲ್ಲಿ ಆಸಕ್ತಿ ಮೂಡಿಸಬೇಕು ಎಂದು ಮಂಗಳ ಕಲಾ ಸಾಹಿತ್ಯ ವೇದಿಕೆಯ ಗೌರವ ಸಲಹೆಗಾರ ಸಚ್ಚಿದಾನಂದ ನಾಯಕ್ ಸಲಹೆ ನೀಡಿದರು.
ಉಡುಪಿಯ ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳದ ವತಿಯಿಂದ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪರ್ಕಳದ ಸಹಕಾರದಲ್ಲಿ ಶಾಲಾ ಮಕ್ಕಳಿಗಾಗಿ ಭಾನುವಾರ (ಆ.30) ಆಯೋಜಿಸಿದ್ದ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯ ಅಧ್ಯಕ್ಷ ಗಣೇಶ್ ಕುಲಾಲ್ ಕೆಳಪರ್ಕಳ. ಗಣೇಶ್ ಸಣ್ಣಕ್ಕಿಬೆಟ್ಟು, ಸಂದೀಪ್ ನಾಯ್ಕ್ ಕಬ್ಯಾಡಿ, ಸಂತೋಷಕುಮಾರ್, ರಾಘವೇಂದ್ರ ನಾಯಕ್, ರಾಜೇಶ್ ನಾಯಕ್, ಕೃಷ್ಣ ನಾಯಕ್, ಅನಂತರಾಮ ನಾಯಕ್, ಸುಧಾಕರ್ ನಾಯಕ್ ಕಬ್ಯಾಡಿ. ಬಸವರಾಜ್ ನಡಿದಾರೆ, ರವಿರಾಜ್ ಆಚಾರ್ಯ. ಸತೀಶ್ ಶೆಟ್ಟಿಗಾರ್, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಗಿರೀಶ್ ನಾಯಕ್, ಮಹಿಳಾ ವಿಭಾಗದ ಗೌರವ ಸಲಹೆಗಾರರಾದ ಲತಾ ಸುರೇಶ್, ವೀಣಾ ಜಗದೀಶ್, ಸಭಾಭವನದ ವ್ಯವಸ್ಥಾಪಕ ಜಯದೀಪ್ ಉಪಸ್ಥಿತರಿದ್ದರು.
ಖ್ಯಾತ ವ್ಯಂಗ್ಯಚಿತ್ರಕಾರ ಗೋಪಿ ಹಿರೇಬೆಟ್ಟು, ಗಣಪತಿ ವಿಗ್ರಹ ತಯಾರಕ ದೇವರಾಜ್ ನಾಯಕ್ ಸಣ್ಣಕ್ಕಿಬೆಟ್ಟು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ವೇದಿಕೆಯ ಸದಸ್ಯ ಅಶೋಕ್ ಸಣ್ಣಕ್ಕಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.