ಉಡುಪಿಯ ಕಡಿಯಾಳಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಚಿತ್ರಸ್ಪರ್ಧೆಯನ್ನು ಎಂ. ಗಂಗಾಧರ್ ರಾವ್ ಉದ್ಘಾಟಿಸಿದರು. ಯು. ಮೋಹನ್ ಉಪಾಧ್ಯ, ಪಾಂಗಾಳ ವಸಂತ ಭಟ್, ಕೆ.ರಾಘವೇಂದ್ರ ಕಿಣಿ, ಎಂ. ವಲ್ಲಭ ಭಟ್, ಸತೀಶ್ ಕುಲಾಲ್ ಇದ್ದರು.
* ಎಂ. ಗಂಗಾಧರ್ ರಾವ್ ಅನಿಸಿಕೆ
* ಗಣೇಶನ ಚಿತ್ರಸ್ಪರ್ಧೆ ಉದ್ಘಾಟನೆ
ಉಡುಪಿ: ಭಾರತೀಯ ಕಲೆಗಳಿಗೆ ಅದರದ್ದೇ ಆದ ವಿಶಿಷ್ಟತೆಯಿದೆ. ಶಿಲ್ಪಕಲೆಯಲ್ಲಿ ಶಿಲ್ಪ ಸದ್ದು ಮಾಡಿದರೆ ಸಂಗೀತ, ಯಕ್ಷಗಾನದಲ್ಲಿ ಸ್ವರ-ರಾಗ ಸದ್ದು ಮಾಡುತ್ತವೆ. ಆದರೆ, ಚಿತ್ರಕಲೆಯಲ್ಲಿ ಮೌನವೇ ಪ್ರಾಧಾನ್ಯ ಆಗಿರುತ್ತದೆ ಎಂದು ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಕಡಿಯಾಳಿಯ ಶರ್ವಾಣಿ ಮಂಟಪದಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ.) ಕಡಿಯಾಳಿಯ 60ನೇ ವಾರ್ಷಿಕೋತ್ಸವದ ನಿಮಿತ್ತ ಶಾಲಾ ಮಕ್ಕಳಿಗಾಗಿ ಭಾನುವಾರ (ಆ.9) ಆಯೋಜಿಸಿದ್ದ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕೆನರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಯು. ಮೋಹನ್ ಉಪಾಧ್ಯ ಮಾತನಾಡಿದರು. ಸಮಿತಿ ಅಧ್ಯಕ್ಷ ಪಾಂಗಾಳ ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಸ್ವಾಗತಿಸಿದರು. ಸಮಿತಿಯ ಕೋಶಾಧಿಕಾರಿ ಎಂ. ವಲ್ಲಭ ಭಟ್ ವಂದಿಸಿದರು. ಸಮಿತಿಯ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ ಕಾರ್ಯಕ್ರಮ ನಿರ್ವಹಿಸಿದರು. ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು.