ಗಾಂಧಿ ಭವನ ಸುತ್ತ ಕಸ ಕಡ್ಡಿಗಳು.  
ಉಡುಪಿ

ಪಾಳುಬಿದ್ದಿರುವ ಗಾಂಧಿಭವನ ಅನೈತಿಕ ಚಟುವಟಿಕೆ ತಾಣ

ಉಡುಪಿ: ಬನ್ನಂಜೆ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಮುಂಭಾಗದಲ್ಲಿರುವ ಗಾಂಧಿ ಭವನ ಹಲವು ವರ್ಷದಿಂದ ಉಪಯೋಗ ಶೂನ್ಯವಾಗಿದ್ದು, ನಿರ್ವಹಣೆ ಕೊರತೆಯಿಂದ ಹಾಳುಬಿದ್ದು ದುರ್ನಾತ ಬೀರುತ್ತಿದೆ. ಕಿಟಕಿಯ, ಪ್ರವೇಶ ದ್ವಾರದ ಬಾಗಿಲುಗಳು ತೆರೆದುಕೊಂಡಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.
ಕಂಪೌಂಡ್​ ಸುತ್ತಲು ಗಿಡಗಂಟಿ, ಹುಲ್ಲುಗಳು ಬೆಳೆದುನಿಂತಿವೆ. ಗೋಡೆಗಳಿಗೆ ಬಳಿದ ಬಣ್ಣ ಮಾಸಿಹೋಗಿ, ಪಾಚಿಬೆಳೆದುಕೊಂಡಿದೆ. ನೀರಿನ ಟ್ಯಾಂಕಿನ ಮುಚ್ಚಳ ತೆರೆದುಕೊಂಡಿದ್ದು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಕಂಪೌಂಡಿನ ಒಳಾಂಗಣ ಮತ್ತು ಸಭಾಭವನದ ಒಳಾಂಗಣದಲ್ಲಿ ಕಸ ತ್ಯಾಜ್ಯಗಳು ಚದುರಿಕೊಂಡಿವೆ. ಶೌಚಾಲಯದ ಬಾಗಿಲು ಮುರಿದುಬಿದ್ದಿದೆ. ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ಕಿಡಿಗೇಡಿಗಳು ಪೋಕರಿಗಳ ಅಡ್ಡೆಯಾಗಿದೆ. ಜುಗಾರಿ ಆಡುವರು, ಮದ್ಯವ್ಯಸನಿಗಳು ಪಾನಮತ್ತರಾಗಿ ಮಲಗುತ್ತಿದ್ದಾರೆ.
1985ರಲ್ಲಿ ನಿರ್ಮಾಣ
ಲಕ್ಷಿ$್ಮನಾರಾಯಣ ಭಜನಾ ಮಂಡಳಿ ಇದ್ದ ಈ ಜಾಗದಲ್ಲಿ ಉಡುಪಿ ನಗರಸಭೆಯಿಂದ ದಲಿತರ ಮೀಸಲು ಹಣದಲ್ಲಿ ನಿಮಾರ್ಣಗೊಂಡಿದ್ದ ಬನ್ನಂಜೆಯ ಗಾಂಧಿ ಭವನವನ್ನು 1985ರಲ್ಲಿ ಉದ್ಘಾಟಿಸಲಾಗಿತ್ತು. ನಗರಸಭೆ ವ್ಯಾಪ್ತಿಯ ದಲಿತರ ಸಭೆ ಸಮಾರಂಭಕ್ಕೆ ಮೀಸಲಿಡಲಾಗಿತ್ತು. ದಲಿತರ ಸಭೆ- ಸಮಾರಂಭ, ಸಾಂಸತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ನಡೆವೆ ಗಾಂಧಿ ಭವನದ ಕಟ್ಟಡದ ನಿರ್ವಾಹಣೆಗೆ ಉಡುಪಿ ನಗರಸಭೆ ಹಣ ನೀಡದೆ ಇರುವುದರಿಂದ ಕಟ್ಟಡ ಶಿಥಿಲಗೊಂಡು ಸಭೆ ಸಮಾರಂಭ ನಡೆಸುವುದು ಅಸಾಧ್ಯವಾಯಿತು. ಜಿಲ್ಲಾಡಳಿತ ಕೂಡ ಈ ಭವನವನ್ನು ಬೇರೆ ಬೇರೆ ಕಾರ್ಯಕ್ರಮಕ್ಕೆ ನೀಡುತ್ತಿತ್ತು. ಆದಿಉಡುಪಿಯಲ್ಲಿ ಅಂಬೇಡ್ಕರ್​ ಭವನ ನಿರ್ಮಾಣವಾದ ಬಳಿಕ ದಲಿತರಿಗೆ ಸಂಬಂಧಪಟ್ಟ ಕಾರ್ಯಕ್ರಮ ಪೂರ್ತಿ ಅಲ್ಲಿಗೆ ಶಿಪ್ಟ್​ ಆಯಿತು. ಹೀಗಾಗಿ ಕಳೆದ 2 ದಶಕಗಳಿಂದ ನಿರ್ವಹಣೆ ಇಲ್ಲದೆ ಸೊರಗಿದೆ.
ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರ
ಹಿರಿಯ ನಾಗರಿಕರ ಸಹಾಯವಾಣಿ, ಸ್ವಸಹಾಯ ಸಂಕ್ಕೆ ಜಾಗ ಹಸ್ತಾಂತರಿಸುವುದಕ್ಕೆ ದಲಿತ ಸಂಟನೆಗಳು ವಿರೋಧವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಸ್​ಟಿ ಎಸ್​ಸಿ ಕಾಯ್ದೆಯಲ್ಲಿ ದಾಖಲಾದ ಪ್ರಕರಣಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯಕ್ಕೆ ಜಾಗವನ್ನು ಹಸ್ತಾಂತರಿಸಿ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.