ಉದ್ಯಾವರದಲ್ಲಿ ಫ್ರೆಂಡ್ಸ್ ಸರ್ಕಲ್ನ 'ಯುಎಫ್ಸಿ ಮಾತುಕತೆ' ಸಂಚಿಕೆಯನ್ನು ರೋಯ್ಸ್ ಮಾರ್ವಿನ್ ಫೆರ್ನಾಂಡಿಸ್ ಬಿಡುಗಡೆ ಮಾಡಿದರು. ಉದ್ಯಾವರ ನಾಗೇಶಕುಮಾರ್, ರಿಯಾಝ್ ಪಳ್ಳಿ, ಚಂದ್ರಾವತಿ ಎಸ್. ಭಂಡಾರಿ, ಶರತ್ ಕುಮಾರ್, ಯು.ಪದ್ಮನಾಭ ಕಾಮತ್, ಗಿರೀಶ್ ಗುಡ್ಡೆಯಂಗಡಿ ಇದ್ದರು.
* ರೋಯ್ಸ್ ಮಾರ್ವಿನ್ ಫೆರ್ನಾಂಡಿಸ್ ಅಭಿಪ್ರಾಯ
* ಯುಎಫ್ಸಿ ಮಾತುಕತೆ ಸಂಚಿಕೆ ಬಿಡುಗಡೆ
ಉಡುಪಿ: ಯಾವುದೇ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ದಾಖಲಾತಿಯೂ ಸಹ ಇಂದು ಪ್ರಮುಖವಾಗಿದೆ. ಅಲ್ಲದೆ, ಸಂಸ್ಥೆಗಳು ಮಾಡಿದ ಸಾಮಾಜಿಕ ಚಟುವಟಿಕೆಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಾದ ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಹತ್ತು ವರ್ಷದಿಂದ ಪ್ರಕಟಿಸುತ್ತಿರುವ 'ಯುಎಫ್ಸಿ ಮಾತುಕತೆ' ಸಂಚಿಕೆ ಮಹತ್ವದ್ದಾಗಿದೆ ಎಂದು ಉಡುಪಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ರೋಯ್ಸ್ ಮಾರ್ವಿನ್ ಫೆರ್ನಾಂಡಿಸ್ ಅಭಿಪ್ರಾಯಪಟ್ಟರು.
ಉಡುಪಿಯ ಉದ್ಯಾವರದಲ್ಲಿ ಸೇವಾ ಮತ್ತು ಸಾಂಸತಿಕ ವೇದಿಕೆಯಾದ ಫ್ರೆಂಡ್ಸ್ ಸರ್ಕಲ್ ಉದ್ಯಾವರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಯುಎಫ್ಸಿ ಮಾತುಕತೆ-2025' ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತಾಡಿದರು.
ಪ್ರಚಾರಕ್ಕಾಗಿ ಅಲ್ಲ
ವೇದಿಕೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್ ಮಾತನಾಡಿ, ನಮ್ಮ ಕೆಲಸ ಹಾಗೂ ಕೈಗೊಂಡ ಕಾರ್ಯಗಳು ಒಂದೆಡೆ ದಾಖಲಾಗಿ ಇರಲಿ ಎಂಬ ಕಾರಣಕ್ಕೆ ಸಂಚಿಕೆಪ್ರಕಟಿಸುತ್ತೇವೆ. ಯಾವುದೇ ಪ್ರಚಾರಕ್ಕಾಗಿ ಅಲ್ಲ. 10 ವರ್ಷದ ನಂತರ ಸಂಸ್ಥೆ ಮಾಡಿದ ಕೆಲಸದ ಬಗ್ಗೆ ಈ ಸಂಚಿಕೆ ಮಾಹಿತಿ ನೀಡಲಿದೆ. ಈ ಕಾರ್ಯ ಮುಂದುವರಿಯಲಿ ಎಂದರು.
ಮಾಜಿ ಅಧ್ಯಕ್ಷ ರಿಯಾಝ್ ಪಳ್ಳಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕಿ ಚಂದ್ರಾವತಿ ಎಸ್. ಭಂಡಾರಿ , ಶರತ್ ಕುಮಾರ್, ಯು.ಪದ್ಮನಾಭ ಕಾಮತ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್, ಉಪಾಧ್ಯಕ್ಷ ಶ್ರೀಧರ ಮಾಬಿಯಾನ್ , ಕಾರ್ಯದರ್ಶಿಗಳಾದ ಆಶಾ ವಾಸು, ಭಾಸ್ಕರ್ ಬಂಗೇರ, ಮಾಜಿ ಅಧ್ಯಕ್ಷ ಅನುಪ್ ಕುಮಾರ್, ಸದಸ್ಯ ಲೋಕನಾಥ್ ಬೊಳ್ಜೆ ಇತರರು ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ಕಾರ್ಯಕ್ರಮ ನಿರ್ವಹಿಸಿದರು.
"
ಉದ್ಯಾವರ ಗ್ರಾಮದಲ್ಲಿ ಜನಪರ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಈ ಸಂಸ್ಥೆ 50 ಸಂವತ್ಸರ ದಾಟಿರುವುದು ಹಾಗೂ ಜನರಿಂದಲೂ ಸೂಕ್ತ ಪ್ರೋತ್ಸಾಹ ಲಭಿಸುತ್ತಿರುವುದು ಸಂತಸ ವಿಚಾರ. ಆರೋಗ್ಯವಂತ ಮನಸ್ಸುಗಳನ್ನು ಒಂದಾಗಿಸಿ ಜಾತ್ಯತೀತವಾಗಿ ಈ ದುರಿತ ಕಾಲದಲ್ಲೂ ಕೆಲಸ ಮಾಡುವುದು ಸಾಹಸವೇ ಸರಿ.
— ರೋಯ್ಸ್ ಮಾರ್ವಿನ್ ಫೆರ್ನಾಂಡಿಸ್. ಉಡುಪಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ.