ಆದಿಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಲ. ಶಾಲಿನಿ ಡಿ. ಬಂಗೇರ ಕನ್ನಡಕ ವಿತರಿಸಿದರು. ಪುಷ್ಪರಾಜ್ ಶೆಟ್ಟಿ ಕೆ., ದಿಲೀಪ್ ಶೆಟ್ಟಿ, ಸಂತೋಷ್ ಶೆಟ್ಟಿ ಪಂಚರತ್ನ, ಡಾ. ಶಿಲ್ಪಾ, ಅಶ್ವಿನಿ ಶೆಟ್ಟಿ ಇದ್ದರು.
* ಲ. ಶಾಲಿನಿ ಡಿ. ಬಂಗೇರ ಅನಿಸಿಕೆ
* ಫಲಾನುಭವಿಗಳಿಗೆ ಕನ್ನಡಕ ಉಚಿತ ವಿತರಣೆ
ಉಡುಪಿ: ದೇಹದ ಪ್ರತಿಯೊಂದು ಅಂಗವೂ ಪ್ರಮುಖವಾಗಿದ್ದು ಜಗತ್ತನ್ನು ನೋಡಬಲ್ಲ ಕಣ್ಣುಗಳಿಗೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಕಣ್ಣುಗಳ ಆರೈಕೆ, ರಕ್ಷಣೆಯೂ ಸಹ ಅತ್ಯಗತ್ಯವಾಗಿದೆ ಎಂದು ಜಿಲ್ಲೆ 317ಸಿ ಲಯನ್ ಕ್ಯಾಬಿನೆಟ್ ಸೆಕ್ರೆಟರಿ ಲ. ಶಾಲಿನಿ ಡಿ. ಬಂಗೇರ ಅನಿಸಿಕೆ ವ್ಯಕ್ತಪಡಿಸಿದರು.
ಆದಿಉಡುಪಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಬಂಟರ ಸಂಘ (ರಿ.) ಕಂಬಳಕಟ್ಟ ಕೊಡವೂರು, ಜೆಎಸ್ಡಬ್ಲ್ಯು ಫೌಂಡೇಷನ್ ಮಂಗಳೂರು, ಲಯನ್ಸ್ ಕ್ಲಬ್ ಉಡುಪಿ ಚೇತನ ಆಶ್ರಯದಲ್ಲಿ ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣೆ ಮಾಡಿಸಿಕೊಂಡಿದ್ದ ಫಲಾನುಭವಿಗಳಿಗೆ ಕನ್ನಡಕ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಬಂಟರ ಸಂಘ (ರಿ.) ಕಂಬಳಕಟ್ಟದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು. ಜೆಎಸ್ಡಬ್ಲ್ಯು ಮಂಗಳೂರಿನ ಜನರಲ್ ಮೆನೇಜರ್ ದಿಲೀಪ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಚೇತನ ಅಧ್ಯಕ್ಷ ಸಂತೋಷ್ ಶೆಟ್ಟಿ ಪಂಚರತ್ನ, ಇಂಡಿಯಾ ವಿಷನ್ ಇನ್ಸ್ಟಿಟ್ಯೂಟ್ನ ಡಾ. ಶಿಲ್ಪಾ, ಬಂಟರ ಸಂಘದ ಗೌರವಾಧ್ಯಕ್ಷೆ ಅಶ್ವಿನಿ ಶೆಟ್ಟಿ ಸಂತೆಕಟ್ಟೆ, ಕಾರ್ಯದರ್ಶಿ ವಿಜೇಶ್ ಶೆಟ್ಟಿ ಜನ್ನಿಬೆಟ್ಟು, ನವೀನ್ ಶೆಟ್ಟಿ ಪಡುಮನೆ, ಉಮೇಶ್ ಶೆಟ್ಟಿ ದೊಡ್ಡಮನೆ, ರಮೇಶ್ ಶೆಟ್ಟಿ ಮೂಡುಬೆಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಫಲಾನುಭವಿಗಳಿಗೆ ಕನ್ನಡಕ ವಿತರಿಸಲಾಯಿತು. ಸುರೇಶ್ ಶೆಟ್ಟಿ ಕಂಬಳಕಟ್ಟ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ಶೆಟ್ಟಿ ಮಜಲುಮನೆ ವಂದಿಸಿದರು.