ಉಡುಪಿ ಮಣಿಪಾಲದ ಎಸ್ಬಿಐ ಶಾಖೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಕಾಶ್ ಅಡಿಗ ಉದ್ಘಾಟಿಸಿದರು. ಡಾ. ಶಾಮಿನಿ, ಸುಧೀರ್, ಕೃಷ್ಣರಾಜ್ ಕೆ. ಭಟ್, ಅಕ್ಷಯ್ ಭಾಗವತ್, ಶಿವಾ ರಾಜೀವ್ ಇದ್ದರು.
* ಎಸ್ಬಿಐ ಉಡುಪಿ ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಅಡಿಗ ಭರವಸೆ
* ಎಸ್ಬಿಐ ಮಣಿಪಾಲ ಶಾಖೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಬ್ಯಾಂಕ್ನೊಂದಿಗೆ ವ್ಯವಹಾರ ನಡೆಸುವ ಎಲ್ಲ ಗ್ರಾಹಕರ ಹಿತವೂ ನಮಗೆ ಪ್ರಮುಖ. ಹೀಗಾಗಿ ಬ್ಯಾಂಕಿಂಗ್ ಸೇವೆಯ ಜತೆಗೆ ಗ್ರಾಹಕರು ಮತ್ತು ಸಮಾಜದ ಆರೋಗ್ಯ ರಕ್ಷಣೆಗೂ ಎಸ್ಬಿಐ ಆದ್ಯತೆ ನೀಡುತ್ತದೆ ಎಂದು ಉಡುಪಿ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಪ್ರಕಾಶ್ ಅಡಿಗ ತಿಳಿಸಿದರು.
ಮಣಿಪಾಲದ ಶಾಖೆಯ ಆವರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿಂದ ಮಾಹೆ ವಿದ್ಯಾರ್ಥಿಗಳು ಮತ್ತು ಮಣಿಪಾಲ ಶಾಖೆಯ ಗ್ರಾಹಕರಿಗಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಣಿಪಾಲ ಕೆಎಂಸಿ ಡೆಂಟಲ್ ವಿಭಾಗದ ಸಹಕಾರದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಶಾಮಿನಿ, ಎನ್ಆರ್ಐ ಗ್ರಾಹಕ ಸುಧೀರ್, ಮುಖ್ಯ ವ್ಯವಸ್ಥಾಪಕರಾದ ಕೃಷ್ಣರಾಜ್ ಕೆ. ಭಟ್, ಅಕ್ಷಯ್ ಭಾಗವತ್, ಮಣಿಪಾಲ ಶಾಖೆಯ ಉಪ ವ್ಯವಸ್ಥಾಪಕ ಶಿವಾ ರಾಜೀವ್ ಮತ್ತು ಗ್ರಾಹಕರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಪರೀಕ್ಷೆ, ದಂತ ತಪಾಸಣೆ, ಬಿಎಂಐ ಮತ್ತು ವೈದ್ಯರಿಂದ ಸಲಹೆ ನೀಡಲಾಯಿತು. ನೂರಾರು ಜನರು ಪ್ರಯೋಜನ ಪಡೆದರು.