ಉಡುಪಿಯಲ್ಲಿ ಲಕ್ಷ್ಮೀವರ ಶ್ರೀಗಳ ಸ್ಮರಣಾರ್ಥ ಚಕ್ಕುಲಿ ವಿತರಣೆ ಕಾರ್ಯಕ್ರಮವನ್ನು ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು. ಲಾತವ್ಯ ಆಚಾರ್ಯ, ನಾಗೇಶ್​ ಹೆಗ್ಡೆ, ನಿತ್ಯಾನಂದ ಒಳಕಾಡು, ಭಾಸ್ಕರ್​ ಶೇರಿಗಾರ್​, ಗೀತಾ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಸ್​ ಶೆಟ್ಟಿ, ಗಂಗಾಧರ್​ ಇದ್ದರು. 
ಉಡುಪಿ

ವಿಶೇಷತೆಯಿಂದ ನೆನಪಾಗುವ ಲಕ್ಷ್ಮೀವರ ಶ್ರೀಪಾದರು

ಸಹಕಾರಿ ಧುರೀಣ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಅನಿಸಿಕೆ

*  ಉಡುಪಿಯ ನಾಗರಿಕ ಸಮಿತಿಯಿಂದ ಚಕ್ಕುಲಿ ವಿತರಣೆ

ಉಡುಪಿ: ಪ್ರತಿವರ್ಷದ ಜನ್ಮಾಷ್ಟಮಿಯ ಸಂದರ್ಭದಲ್ಲಿ ಏನಾದರೊಂದು ಹೊಸತು ವಿಶೇಷತೆಯ ಮೂಲಕ ಶೀರೂರು ಮಠದ ಹಿಂದಿನ ಯತಿಗಳಾಗಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರು ಗಮನ ಸೆಳೆಯುತ್ತಿದ್ದರು. ಅವರ ಸ್ಮರಣಾರ್ಥ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರತಿವರ್ಷ ಸಾರ್ವಜನಿಕರಿಗೆ ಉಚಿತವಾಗಿ ಚಕ್ಕುಲಿ ವಿತರಿಸುವ ಮೂಲಕ ವಿಟ್ಲಪಿಂಡಿ ಉತ್ಸವಕ್ಕೆ ಕೊಡುಗೆ ನೀಡುತ್ತ ಬಂದಿದ್ದು, ನಿತ್ಯಾನಂದ ಒಳಕಾಡುವ ಅವರ ಸಮಾಜ ಸೇವೆಗಳು ಜನಮಾನಸದಲ್ಲಿ ಸದಾ ಉಳಿಯುತ್ತದೆ ಸಹಕಾರಿ ಧುರೀಣ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಶ್ಲಾಘಿಸಿದರು.
ಉಡುಪಿಯ ನಾಗರಿಕ ಸಮಿತಿಯ ಕಚೇರಿ ಮುಂಭಾಗದಲ್ಲಿ ಜನ್ಮಾಷ್ಟಮಿ ನಿಮಿತ್ತ ಹಾಗೂ ಶೀರೂರು ಲಕ್ಷ್ಮೀವರ ಶ್ರೀಪಾದರ ಸವಿ ನೆನಪಿಗಾಗಿ ಆಯೋಜಿಸಿದ್ದ 10 ಸಾವಿರ ಉಚಿತ ಚಕ್ಕುಲಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಕ್ಷ್ಮೀವರ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮಾತನಾಡಿ, ನಾಗರಿಕ ಸಮಿತಿ ಕೆಲ ವರ್ಷದಿಂದ ಶ್ರೀಗಳ ಸವಿನೆನಪಿಗಾಗಿ ಸಾರ್ವಜನಿಕರಿಗೆ ಉಚಿತವಾಗಿ ಚಕ್ಕುಲಿ ವಿತರಿಸುವ ಮೂಲಕ ಅಷ್ಟಮಿ ಹಬ್ಬವನ್ನು ಸ್ಮರಣೀಯ ಮಾಡುತ್ತಿದ್ದಾರೆ ಎಂದರು.
ನಾಗರಿಕ ಸಮಿತಿಯ ಅಧ್ಯಕ್ಷ ನಾಗೇಶ್​ ಹೆಗ್ಡೆ ಮಾತನಾಡಿದರು. ಉದ್ಯಮಿ ಭಾಸ್ಕರ್​ ಶೇರಿಗಾರ್​, ಗೀತಾ ನಾಗೇಶ್​ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಸ್​ ಶೆಟ್ಟಿ, ಗಂಗಾಧರ್​, ವಾಸುದೇವ್​, ಶಂಕರ್​ ನಾಯಕ್​, ಸುಮಾ ಆಚಾರ್​, ದೇವಕಿ ಬಾರ್ಕೂರು ಇತರರು ಉಪಸ್ಥಿತರಿದ್ದರು.
ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಶಂಕರ್​ ನಾಯಕ್​ ಅವರ ತಂಡ ಸ್ಥಳದಲ್ಲಿ ಚಕ್ಕುಲಿ ತಯಾರಿಸಿಕೊಟ್ಟರು.