ಉಡುಪಿಯ ಕಾಡಬೆಟ್ಟು ಟಿ.ಎ. ಪೈ ಮೋಡರ್ನ್​ ಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್​ ವಿತರಿಸಲಾಯಿತು. ರಮೇಶ್​ ತಿಂಗಳಾಯ, ಎಚ್​.ಆರ್​. ಶೆಣೈ, ಪೂರ್ಣಿಮಾ ಶೆಟ್ಟಿ, ಯು.ರಾಮಪ್ಪ, ನಾರಾಯಣ ಭಂಡಾರಿ, ಹರೀಶ್​ ಪೂಜಾರಿ, ಸುಲೋಚನಾ ಇತರರಿದ್ದರು. 
ಉಡುಪಿ

ವಿದ್ಯಾರ್ಥಿಗಳ ಬ್ಯಾಗ್​ ಒಳಗಿದೆ ಭವಿಷ್ಯ

* ಸಮಾಜ ಸೇವಕ ರಮೇಶ್​ ತಿಂಗಳಾಯ ಅನಿಸಿಕೆ

* ಕಾಡಬೆಟ್ಟು ಶಾಲೆ ಮಕ್ಕಳಿಗೆ ಬ್ಯಾಗ್​ ವಿತರಣೆ

ಉಡುಪಿ: ವಿದ್ಯಾರ್ಥಿಗಳ ಬ್ಯಾಗ್​ನೊಳಗೆ ಅವರ ಮುಂದಿನ ಭವಿಷ್ಯ ಅಡಗಿದೆ. ಹೀಗಾಗಿ ಮುಂದಿನ ರ್ನಿದಿಷ್ಟ ಗುರಿಯೊಂದಿಗೆ ಭವಿಷ್ಯದ ಜವಾಬ್ದಾರಿಯನ್ನು ತುಂಬಿಸಿಕೊಳ್ಳಬೇಕು. ಅದಕ್ಕೆಂದೇ ದಾನಿಗಳು ತಮಗೆ ಉಚಿತವಾಗಿ ಬ್ಯಾಗ್​ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್​ ತಿಂಗಳಾಯ ಕಿವಿಮಾತು ಹೇಳಿದರು.
ಉಡುಪಿಯ ಕಾಡಬೆಟ್ಟಿನಲ್ಲಿರುವ ಟಿ.ಎ. ಪೈ ಮೋಡರ್ನ್​ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸುದೈವ  ಕುಟುಂಬಕಂ ಚಾರಿಟೇಬಲ್​ ಟ್ರಸ್ಟ್​ ನ ವತಿಯಿಂದ ಹಾಗೂ ಸೌದಿ ಅರೇಬಿಯಾದ ರಿಯಾದ್​ ಗ್ರೂಪ್​ ಹಾಗೂ ಲಿಟ್ಲ್​ ಪೈ ಮಾಲೀಕ ಐರೋಡಿ ಗಿರಿಧರ್​ ಪೈ ಅವರ ಸಹಕಾರದಲ್ಲಿ 150 ಬ್ಯಾಗ್​ಗಳನ್ನು ಶಾಲಾ ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಶಾಲೆಯ ಮೆನೇಜಿಂಗ್​ ಟ್ರಸ್ಟಿ ಎಚ್​.ಆರ್​. ಶೆಣೈ, ವಸುದೈವ ಕುಟುಂಬಕಂನ ಟ್ರಸ್ಟಿ ಪೂರ್ಣಿಮಾ ಶೆಟ್ಟಿ, ಯುಕ್ತಿ ಲಯನ್ಸ್​ ಕ್ಲಬ್​ನ ಯು.ರಾಮಪ್ಪ, ಈಶ್ವರ್​ ಮಲ್ಪೆ ತಂಡದ ಹರೀಶ್​ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಟ್ರಸ್ಟಿ ಶಿವಪ್ರಸಾದ್​, ಹಳೆಯ ವಿದ್ಯಾರ್ಥಿ ಅಶೋಕ್​ ಶೆಟ್ಟಿ, ವಸುದೈವ ಕುಟುಂಬಕಂನ ಸದಸ್ಯರಾದ ಲತಾ ಭಟ್​,ದ ಶರಥ್​ ಸಿಂಗ್​, ರಾಮಪ್ಪ ಸಾಲ್ಯಾನ್​, ವತ್ಸಲಾ ಕೋಟ್ಯಾನ್​, ಉಪ್ಪೂರಿನ ಸ್ಪಂದನಾ ಆಶ್ರಮದ ಜನಾರ್ದನ್​ ಪಾಲ್ಗೊಂಡಿದ್ದರು. 
ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಲೋಚನಾ ವಂದಿಸಿದರು. ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.