ಆನ್‌ಲೈನ್‌ ವಂಚನೆ 
ಉಡುಪಿ

ಕ್ರೆಡಿಟ್ ಕಾರ್ಡ್‌ನಿಂದ ಲಕ್ಷಾಂತರ ರೂ. ವಂಚನೆ

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕುಂದಾಪುರ: ಕ್ರೆಡಿಟ್ ಕಾರ್ಡ್ ಬಳಸಿ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಲಪಟಾಯಿಸಲಾಗಿದೆ. ಕುಂದಾಪುರದ ಸಾರಿಕಾ ಪಿ.ವಿ. ಅವರ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ 32,933 ರೂ.ಗಳಂತೆ ಐದು ಬಾರಿ ಒಟ್ಟು 1,64,666 ರೂ. ಹಣ ಕಡಿತವಾಗಿದೆ. ಈ ಬಗ್ಗೆ ಅವರ ಮೊಬೈಲ್‌ನಲ್ಲಿ ಯಾವುದೇ ಒಟಿಪಿ ಆಗಲಿ, ಕಾರ್ಡ್ ವೆರಿಪಿಕೇಶನ್ ಕೋಡ್ ನೀಡದೆ ಕ್ರೆಡಿಟ್ ಕಾರ್ಡ್ ನಂಬರ್‌ನಿಂದ ಸೈಬರ್ ಅಪರಾಧಿಗಳು ಹಣ ಲಪಟಾಯಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳೆತ ಸ್ಥಿತಿಯಲ್ಲಿ ಮೀನುಗಾರನ ಮೃತದೇಹ ಪತ್ತೆ

ಕುಂದಾಪುರ: ಮೀನುಗಾರಿಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಹೊನ್ನಾವರ ಚಂದ್ರಾಣಿ ಕರ್ಕೆ ಗ್ರಾಮದ ವಿದ್ಯಾಧರ ಗೌಡ ಎಂಬುವರ ಮೃತದೇಹ ಕುಂದಾಪುರದ ಕೋಡಿ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಅ.3ರಂದು ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಕೋಡಿ ಸಮುದ್ರದಲ್ಲಿ ಪತ್ತೆಯಾದ ಮೃತದೇಹವನ್ನು ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ತಂಡದ ಸದಸ್ಯರು ದಡಕ್ಕೆ ತಂದಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.