ಪಡುಬಿದ್ರಿ: ಮೂಳೂರಿನಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ವೊಂದರ 2ನೇ ಮಹಡಿಯಲ್ಲಿರುವ ಫ್ಲಾೃಟ್‌ವೊಂದನ್ನು ನೀಡುವುದಾಗಿ ಹಣ ಪಡೆದು ಫ್ಲಾೃಟ್ ಹಸ್ತಾಂತರಿಸದೆ ಮೂಡುಬಿದಿರೆಯ ಹಲಿಮಾಬಿ ಎಂಬುವರು ವಂಚಿಸಿದ್ದಾರೆ ಎಂದು ಉಚ್ಚಿಲದ ಹಸನ್ ಯು. ಎಂಬುವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪರಚಯಸ್ಥರೇ ಆಗಿರುವ ಹಲಿಮಾಬಿ 2015ರಲ್ಲಿ ರಾಯಲ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್ನರ್ ಎಲಿಗನ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಎಂಬುದಾಗಿ ಹಸನ್ ಅವರನ್ನು ಸಂಪರ್ಕಿಸಿ, ಮೂಳೂರಿನಲ್ಲಿ ನಿರ್ಮಾಣ ಮಾಡಲಿರುವ ಅಪಾಟ್‌ಮೆಂರ್ಟ್‌ನಲ್ಲಿ ಫ್ಲಾೃಟ್ 27,56,000 ರೂ.ಗೆ ಮಾರಾಟಕ್ಕಿದೆ. 6 ತಿಂಗಳೊಳಗೆ ಅದನ್ನು ಪೂರ್ಣಗೊಳಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ ಹಣ ಪಾವತಿಸುವಂತೆ ಪ್ರೇರೆಪಿಸಿದ್ದರು. ಅದರಂತೆ 2018 ಮತ್ತು 2019ರಲ್ಲಿ ಬ್ಯಾಂಕ್ ಹಾಗೂ ನಗದು ರೂಪದಲ್ಲಿ ಒಟ್ಟು 15 ಲಕ್ಷ ರೂ. ಪಡೆದಿದ್ದರು. ಬಳಿಕ ಆರೋಪಿ ಕಟ್ಟಡ ಪೂರ್ಣಗೊಳಿಸಲು ಮತ್ತು ಭರವಸೆ ನೀಡಿದಂತೆ ಫ್ಲಾೃಟ್ ಹಸ್ತಾಂತರಿಸಲು ವಿಫಲರಾಗಿದ್ದರು.
ಆರೋಪಿ ಸುಳ್ಳು ಕಾರಣ ನೀಡುವ ಮೂಲಕ ಫ್ಲಾೃಟ್‌ನ ಸ್ವಾಧೀನವನ್ನು ಹಸ್ತಾಂತರಿಸಿಲ್ಲ ಹಾಗೂ ಪಾವತಿಸಿದ ಹಣ ಹಿಂತಿರುಗಿಸಿಲ್ಲ. ನೋಂದಣಿ ನಂತರ ಫ್ಲಾೃಟ್‌ನ ಸ್ವಾಧೀನ ಹಸ್ತಾಂತರಿಸುವಂತೆ ಒತ್ತಾಯಿಸಿದಾಗ, ರೌಡಿಗಳ ಸಹಾಯದಿಂದ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹಸನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.