Crime 
ಉಡುಪಿ

ಪಶು ಆಹಾರ ಮಾರಾಟ ಮಾಡಿ ವಂಚನೆ

ಇಂದಿರಾ ಎನ್ ಕೆ
ಕಾಸರಗೋಡು:ಸಂಸ್ಥೆಗೆ ಮಾಹಿತಿ ನೀಡದೆ ಹಬ್‌ನಿಂದ ಪಶು ಆಹಾರ ಮಾರಾಟ ಮಾಡಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಎಳಂಬಚ್ಚಿ ನಿವಾಸಿ ಬಿಜು ಪಿ.ಕೆ. ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಕೊಯಿಪ್ಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಿ.ಎಸ್. ಸಂಸ್ಥೆಯ ಹಬ್‌ನಿಂದ ತಲಾ 25 ಕಿಲೋದ 1221 ಗೋಣಿ ಚೀಲ ಪಶು ಆಹಾರವನ್ನು 2025 ಆ.8 ಮತ್ತು 2026 ಜು.14ರ ನಡುವಿನ ಅವಧಿಯಲ್ಲಿ ಸಂಸ್ಥೆ ಅರಿವಿಗೆ ಬಾರದೆ ಮಾರಾಟ ಮಾಡಿರುವುದಾಗಿ ಪ್ರಸ್ತುತ ಸಂಸ್ಥೆ ಸಿಬ್ಬಂದಿ, ಎರ್ನಾಕುಲಂ ವಡಪ್ಪಳ್ಳಿ ಟೋಲ್ ನಿವಾಸಿ ಜೋಜೋ ಕುಟ್ಟಿ ಜೇಕಬ್ ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ.